ಕುಮಟಾ:ಸ್ಥಳೀಯ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೂರೂರಿನಲ್ಲಿ ಇಂದು ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ “ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ” ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ಎಮ್.ಜಿ.ಭಟ್ಟ ಅವರು “ಇಂದಿನ ವಿದ್ಯಾರ್ಥಿಗಳೇ ನಾಳಿನ ಭವ್ಯ ಭಾರತದ ಪ್ರಜೆಗಳು”.ಮತದಾನದ ಹಕ್ಕನ್ನು ಚಲಾಯಿಸುವುದರ ಮೂಲಕ ಪ್ರಜ್ಞಾವಂತ ನಾಯಕರನ್ನು ಬೆಳಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ.ಪ್ರತಿಯೊಬ್ಬ ವಿದ್ಯಾರ್ಥಿಯೂ ಇದರ ಅರಿವನ್ನು ಹೊಂದಬೇಕು ಮತ್ತು ತನ್ಮೂಲಕ ತಮ್ಮವರನ್ನು ಕುರಿತು ಪ್ರೇರೇಪಿಸಬೇಕು ಎಂದು ಕರೆ ನೀಡಿದರು.

RELATED ARTICLES  ಬೈಕ್ ಕದ್ದವನ ಹೆಡೆಮುರಿ ಕಟ್ಟಿದ ಪೊಲೀಸರು


ಶಿಕ್ಷಕರಾದ ಮನೋಹರ ಹರಿಕಂತ್ರ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಶ್ರೀ ಜಿ.ಆರ್.ನಾಯ್ಕ ಸ್ವಾಗತಿಸಿದರು.ಶ್ರೀ ಲೋಕೇಶ ಹೆಗಡೆ ವಂದಿಸದರು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES  ಬಿಜೆಪಿ ಟಿಕೆಟ್ ಘೋಷಣೆ : ಉತ್ತರ ಕನ್ನಡದಲ್ಲಿ ಯಾರು..? ಯಾರು..?