ಕುಮಟಾ: ತನ್ನ ಶಾಸಕತ್ವದ ಅವಧಿಯಲ್ಲಿನ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ, ಹಾಗೂ ಅಂದಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಂದ ಶಿಲಾನ್ಯಾಸಗೊಂಡ ಸುಮಾರು 10 ಕೋಟಿ ಅನುದಾನದ ಐಗಳಕೋರ್ವೆ ಸೇತುವೆಯ ನಿರ್ಮಾಣದ ಆರಂಭಿಕ ಹಂತದ ಕಾಮಗಾರಿಯನ್ನು ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮೋಹನ್ ಪಟಗಾರ, ಸುರೇಖಾ ವಾರೀಕರ್, ವೆಂಕಟೇಶ್ ನಾಯ್ಕ, ಜಯರಾಮ ನಾಯ್ಕ, ದತ್ತು ಪಟಗಾರ, ಕುಸುಮಾ ಪಟಗಾರ, ದತ್ತು ಕೋಡ್ಕಣಿ, ಪ್ರಕಾಶ ಪಟಗಾರ, ರಾಧ ಪಟಗಾರ, ಮನೋಜ ನಾಯಕ ಮುಂತಾದವರು ಹಾಜರಿದ್ದರು.
ಸೇತುವೆಯ ಕಾಮಗಾರಿಯು ಚುನಾವಣಾ ಪೂರ್ವದಲ್ಲೇ ಶಿಲಾನ್ಯಾಸಗೊಂಡಿದ್ದರೂ ಕೂಡ ನಂತರ ಚುನಾವಣಾ ಘೋಷಣೆ ಹಾಗೂ ಮಳೆಗಾಲದ ಕಾರಣದಿಂದ ಕಾಮಗಾರಿ ಆರಂಭಗೊಳ್ಳಲು ವಿಳಂಬವಾಯಿತು. ಈ ಸೇತುವೆಯ ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದು ಅಂದು ಕ್ಷೇತ್ರದ ಜನ ನೀಡಿದ ಭರವಸೆಯನ್ನು ಈ ಮೂಲಕ ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲಿನ ಜನರು ಸೇತುವೆ ಕಾಮಗಾರಿ ಆರಂಭಗೊಂಡಿದ್ದಕ್ಕೆ ಮಾಜಿ ಶಾಸಕಿಯರನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು.