ಹೊನ್ನಾವರ ತಾಲ್ಲೂಕಿನ ಕಬ್ಬಿನಗದ್ದೆಯಲ್ಲಿ 5 ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ. ದಿವಂಗತ ಕಬ್ಬಿನಗದ್ದೆ ಗಣಪತಿ ಭಟ್ಟರು ಗಣೇಶೋತ್ಸವದ ಸಂಸ್ಥಾಪಕರು. ಕೆಂಪು ಬಣ್ಣದ ಗಣಪತಿ ಕಬ್ಬಿನಗದ್ದೆ ಮನೆತನದ ವಿಶೇಷ. ಸುಮಾರು ೯೦ ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ಉತ್ಸವವನ್ನು ಕಬ್ಬಿನಗದ್ದೆ ಕುಟುಂಬದವರು ನಡೆಸಿಕೊಂಡು ಬಂದಿರುತ್ತಾರೆ . ಉತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 25-08-2017 ರಂದು ಗಣಪತಿಯ ಪ್ರತಿಷ್ಟಾಪನೆ, 26-08-2017 ರಿಂದ 28-08-2017 ರ ವರೆಗೆ ಸಂಜೆ 5 ರಿಂದ 9 ಗಂಟೆಯ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

RELATED ARTICLES  ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಆತ್ಮ ತೃಪ್ತಿ ನನಗಿದೆ: ಬಸವರಾಜ್ ಹೊರಟ್ಟಿ

 

IMG 20170731 WA0018