ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಒಟ್ಟು 45 ಅರ್ಹ ಸಾಹಿತ್ಯ ಮತ್ತು ಜಾನಪದ ಕಲಾವಿದರುಗಳಿಗೆ ಮಾಸಾಶನ ಮಂಜೂರಿಯಾಗಿದ್ದು ,ಇದರಲ್ಲಿ ಕುಮಟಾದ 14 ಮಂದಿ ಜಾನಪದ ಸುಗ್ಗಿ ಕುಣಿತದ ಗುಮಟೆ ಪಾಂಗ್ ಕಲಾವಿದರು ಸಹ ಸೇರಿರುತ್ತಾರೆ. ಕಳೆದ ಒಂದು ವರ್ಷದ ಹಿಂದಿನಿಂದಲೂ ಮಾಸಾಶನ ಬಿಡುಗಡೆಯಾಗದ ಕಾರಣ ,ಈ ಹದಿನಾಲ್ಕು ಕಲಾವಿದರ ಮಾಸಾಶನ ಬಿಡುಗಡೆಗೆ ಕಳೆದ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದೆ ,ಅಲ್ಲದೆ ಈ ಪೈಕಿ ಏಳು ಕಲಾವಿದರುಗಳಿಗೆ ಬಾಕಿ ಉಳಿದ ಮಾಸಾಶನ ತಲಾ 18000 ರೂಪಾಯಿ ಬಿಡುಗಡೆಯಾದ್ದು,ಪ್ರತಿ ತಿಂಗಳು ರೂ.1500 ನಂತೆ ಮಾಸಾಶನಕ್ಕೆ ಅವರುಗಳು ಅರ್ಹತೆ ಪಡೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಆದೇಶಿಸಿದ್ದಾರೆ ಎಂದು ಕುಮಟಾ ಮತ್ತು ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು .
ಕುಮಟಾದ ಜಾನಪದ ಸುಗ್ಗಿ ಕುಣಿತದ ಗುಮಟೆ ಹಾಗೂ ಮುಂತಾದ ಕಲಾವಿದರು ಕೂಡ ಈ ಸಂದರ್ಭದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು .
ಚತುಷ್ಪಥ ಹೆದ್ದಾರಿಯ ನಿರ್ಮಾಣದಿಂದಾಗಿ ದೀವಗಿ ಬಳಿಯ ಹೆದ್ದಾರಿಯ ಅಕ್ಕಪಕ್ಕದ ಅಂಗಡಿ ಮತ್ತು ಮನೆಗಳನ್ನು ಕಳೆದುಕೊಂಡ 19 ನಿರ್ಗತಿಕರಿಗೆ ಅಂತೂ 63 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು , ಬಿಡುಗಡೆಯಾದ ಈ ಹಣ ಅವರವರ ಖಾತೆಗೆ ಜಮಾ ಆಗಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು .ಅಲ್ಲದೆ ನಿರ್ಗತಿಕರಿಗೆ ಅವರ ಖಾತೆಗೆ ಹಣ ಜಮಾ ಆಗಿದ್ದು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಂದು ಹೆಮ್ಮೆಯಿಂದ ಸಾಧನೆಯನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು . .ನೆಲಹಂತದಲ್ಲಿ ಇದ್ದ ಕುಮಟಾ ಸರಕಾರಿ ಕಾಲೇಜಿನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದೆ .ಈ ಕಾಲೇಜು ಕಟ್ಟಡಕ್ಕೆ ನಬಾರ್ಡ್ ನಿಂದ ಒಂದು ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಅಲ್ಲದೆ ಈ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಒಟ್ಟು ಮೂರು ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಪ್ರಗತಿ ವಿವರಿಸಿದರು .
ಹಿರೇಗುತ್ತಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ 93 ಲಕ್ಷ ರೂ., ಹಳದಿಪುರ ತಾರಿ ಬಾಗಿಲಿನ ವರೆಗಿನ ಡಾಂಬರ್ ಮತ್ತು ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಮತ್ತು ಹೊನ್ನಾವರ ಸರಕಾರಿ ಕಾಲೇಜಿಗೆ ಏಳು ಕೋಟಿ ರೂಪಾಯಿ ಹಾಗೂ ಮೂರೂರು ಪಿ.ಎಚ್.ಸಿ ಬಗ್ಗೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಬಿಡುಗಡೆಯಾಗಿದೆ ಎಂದರು .ಈ ಎಲ್ಲ ಹಣವೂ ಮೈತ್ರಿ ಸರಕಾರದಿಂದ ಬಿಡುಗಡೆಯಾಗಿದೆ ಎಂದರು .ಕುಮಟಾ ಮತ್ತು ಹೊನ್ನಾವರ ಕ್ಷೇತ್ರದ ಈ ಎಲ್ಲ ಹಣ ಬಿಡುಗಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀಯುತ ಆರ್ ವಿ ದೇಶಪಾಂಡೆಯವರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು .
ಕುಮಟಾ ಮತ್ತು ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಂತೋಷ್ ನಾಯ್ಕ ಹಾಗೂ ಮಾಸಾಶನ ಮಂಜೂರಿ ಪಡೆದ ಜಾನಪದ ಕಲಾವಿದರುಗಳು ಕೂಡ ಉಪಸ್ಥಿತರಿದ್ದರು.