ಕುಮಟಾ: ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ತಾಲೂಕಿನ ದೀವಗಿಯ ಶ್ರೀನಂದಾ ದಿಂಡೆ ಬಹುಮಾನ ಪಡೆಯುವ ಮೂಲಕ‌ ಸಾಧನೆ ಮಾಡಿದ್ದಾಳೆ. ಬೆಂಗಳೂರಿನ ಆರ್ಟ ಆಪ್ ಲೀವಿಂಗ್ ಸೆಂಟರ್ ನಲ್ಲಿ ನಡೆದ ಸ್ಪರ್ದೆಯಲ್ಲಿ ವಿವಿಧ ರಾಜ್ಯದ ಹತ್ತು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಆ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಮಟಾದ ಎಂಟು ಸ್ಪರ್ಧಿಗಳು ವಿವಿಧ ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಅದರಲ್ಲಿ ಶ್ರೀನಂದಾ ದಿಂಡೆ ಹೆಚ್ಚಿನ ಸಾಧನೆ ತೋರಿ ಬಹುಮಾನ ಪಡೆದಿದ್ದಾಳೆ.

RELATED ARTICLES  ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ವೈರಲ್..?

       ಕುಮಟಾದಲ್ಲಿ ಅಬಾಕಸ್ ಅಭ್ಯಾಸ ಮಾಡುತ್ತಿರುವ ಈಕೆ ತಾಲೂಕು,ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅನೇಕ ಅಬಾಕಸ್ ಸ್ಪರ್ಧೆಯಲ್ಲಿಯೂ ಸಾಧನೆ ಮಾಡಿದ ವಿದ್ಯಾರ್ಥಿ. ಕುಮಟಾದ ದೀವಗಿಯ ಪ್ರಖ್ಯಾತ ವೈದ್ಯರಾದ ಶ್ರೀ ಶಿವಪ್ರಸಾದ ದಿಂಡೆ ಹಾಗೂ ಶ್ರೀಮತಿ ಯಶಾ ಪ್ರಸಾದರವರ ಸುಪುತ್ರಿಯಾಗಿದ್ದು ಶಿಕ್ಷಣದ ಜೊತೆಗೆ ಭರತನಾಟ್ಯ, ಭಾಷಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಈಕೆ ಅತ್ಯುತ್ತಮ ಸಾಧನೆ ತೋರುತ್ತಾ ಬಂದಿದ್ದಾಳೆ.

RELATED ARTICLES  ಕವಿಯಾದವ ಕ್ರೂರಿ ಆಗಲಾರ :ಅರವಿಂದ ಕರ್ಕಿಕೋಡಿ

      ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆಯ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ‌ ಸಲ್ಲಿಸಿದ್ದಾರೆ.