ಕುಮಟಾ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ತಾಲೂಕು ಘಟಕದಿಂದ ಇಂದು ಊರುಕೇರಿಯ ರಾಮನಾಥ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಕುಮಟಾದ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿಯವರು ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಶಾಸಕರು ” ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮದ ಕೆಲಸವಾಗಿದೆ. ಹಾಗೂ ಸಾರ್ವಜನಿಕರಿಗೆ ಏನಾದರು ತೊಂದರೆ ಇದ್ದಲ್ಲಿ ಆ ಸಮಸ್ಯೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಕಳ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ” ಎಂದರು.

RELATED ARTICLES  ಗಲಭೆಯ ಕರಿನೆರಳಲ್ಲಿ ಒದ್ದಾಡುತ್ತಿದೆಯೇ ಉತ್ತರಕನ್ನಡದ ಪ್ರವಾಸೋದ್ಯಮ?

ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷರಾದ ಬಿ. ನಾರಾಯಣ ಹಾಗೂ ಕ.ಜ.ಯೂ ಜಿಲ್ಲಾಧ್ಯಕ್ಷರಾದ ಕಡತೋಕಾ ಮಂಜು , ಹಾಗೂ ಉಪನ್ಯಾಸಕರಾಗಿ ಆಗಮಿಸಿದ ಜಿ. ಎಲ್ ಹಗಡೆ , ಕ.ಜ.ಯೂ ಕುಮಟಾದ ಅಧ್ಯಕ್ಷರಾದ ಅನ್ಸರ್ ಶೇಖ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

RELATED ARTICLES  ಮೃತ ರಾಮಚಂದ್ರ ನಾಯ್ಕ ಮನೆಗೆ ಭೇಟಿ ನೀಡಿದ ದೇಶಪಾಂಡೆ.