ಕುಮಟಾ: ತಾಲೂಕಿನ ಗೋಕರ್ಣದಲ್ಲಿ ಪ್ರವಾಸಕ್ಕೆ ಬಂದು ಇಲ್ಲಿನ ಸಮುದ್ರದಲ್ಲಿ ಈಜಲು ಇಳಿದ ಸಂದರ್ಭದಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿ ಓರ್ವ ಮೃತಪಟ್ಟಿದ್ದು ಇನ್ನೂ ಮೂವರನ್ನು ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ ಘಟನೆ ಗೋಕರ್ಣದ ಬೇಲೆಹಿತ್ತಲ ಬಳಿ ನಡೆದಿದೆ.

ಹೈದರಾಬಾದ್ ನಿಂದ ಕುಟುಂಬದ ಜೊತೆಗೆ ಒಟ್ಟೂ 12 ಜನರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ನಾಲ್ವರು ಸಮುದ್ರದಲ್ಲಿ ಈಜಾಡಲು ಇಳಿದಿದ್ದರು. ಅದರಲ್ಲಿ ಹೈದರಬಾದ್ ಮೂಲದ ಪರಮೇಶ್ವರ ಯಾದವ್ ಮೃತಪಟ್ಟ ಪ್ರವಾಸಿಗ ಎಂದು ವರದಿಯಾಗಿದೆ. ನಾಲ್ವರು ಅಲೆಗಳಿಗೆ ಕೊಚ್ಚಿ ಹೋಗಿ, ರಕ್ಷಣೆಗೆ ಕೂಗಿಕೊಂಡಿದ್ದಾಗ ತಕ್ಷಣ ಮುಖ್ಯ ಕಡಲತೀರದ ಲೈಪ್ ಗಾರ್ಡ್ ಧಾವಿಸಿ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ.

RELATED ARTICLES  ಸತ್ತವರ ಆಧಾರ್ ಪಾನ್ ನಕಲಿ ಸೃಷ್ಟಿಸಿ ಕೋಟಿ ಕೋಟಿ ಲೂಟಿ ಮಾಡಿದವ ಪೊಲೀಸ್ ಬಲೆಗೆ.

ತೀವ್ರ ಅಸ್ವಸ್ಥಗೊಂಡಿದ್ದ ಪರಮೇಶ್ವರ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪ್ರಕರಣದ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

RELATED ARTICLES  ಭೀಕರ ಅಪಘಾತ : ಓರ್ವ ಯುವಕ ಸಾವು : ಇನ್ನೊಬ್ಬ ಯುವಕ ಗಂಭೀರ.