ಶಿರಸಿ: ಆಯುಷ್ ಇಲಾಖೆಯ ಎಸ್.ಸಿ.ಪಿ. ಯೋಜನೆಯಡಿ ಜಿ.ಪಂ. ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದಲ್ಲಿ ಉಚಿತ ಆಯುಷ್ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಜ.30ರಂದು ಕೊಳಗಿಬೀಸ್ ಶ್ರೀ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಿದೆ.

RELATED ARTICLES  ಕುಮಟಾ ಮಂಡಲ ಕಾರ್ಯಕಾರಿಣಿ ಸಭೆ :ಪ್ರಮುಖ ವಿಷಯಗಳ ಚರ್ಚೆ

ಸರಕಾರಿ ಆಯುರ್ವೇದ ಚಿಕಿತ್ಸಾಲಯ ಮತ್ತಿಘಟ್ಟ, ಗ್ರಾಮ ಪಂ.ನೆಗ್ಗು, ಶ್ರೀ ಮಾರುತಿ ದೇವಸ್ಥಾನ ಕೊಳಗೀಬೀಸ್ ಮತ್ತು ನಿಸರ್ಗ ಟ್ರಸ್ಟ್ ಶಿರಸಿ ಇವರ ಸಹಕಾರದೊಂದಿಗೆ ಶಿಬಿರ ನಡೆಯಲಿದೆ. ಆಯುರ್ವೇದ ತಜ್ಞ ವೈದರುಗಳಿಂದ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಸಲಹೆ ನೀಡಲಾಗುತ್ತಿದ್ದು, ಸಾರ್ವಜನಿಕರು ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಉತ್ತರ ಕನ್ನಡದ ಹಲವಡೆ ಕೊರೋನಾ ಕಾಟ