ಕಾರವಾರ: ಕೂರ್ಮಗಡ ಬೋಟ್ ದುರಂತ ಪ್ರಕರಣದಲ್ಲಿ ಕಾಣೆಯಾಗಿದ್ದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹೊಸೂರು ಮೂಲದ ಬಾಲಕ ಸಂದೀಪ(10) ಹಲವು ದಿನದ ಹುಡುಕಾಟದ ನಂತರ ಶವವಾಗಿ ಪತ್ತೆಯಾಗಿದ್ದಾನೆ.
12 ಮಂದಿ ಕುಟುಂಬಸ್ಥರೊಂದಿಗೆ ಕೂರ್ಮಗಡ ಜಾತ್ರೆಗೆ ಆಗಮಿಸಿದ್ದ ಬಾಲಕ ಸೇರಿ ೧೧ಮಂದಿ ಕುಟುಂಬವೇ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದರು.
ಸ್ಥಳೀಯ ಮೀನುಗಾರರಿಂದ ಮಾಹಿತಿ ಸಿಕ್ಕ ಹಿನ್ನಲೆ ಶವ ಪತ್ತೆ ಮಾಡಲಾಗಿದ್ದು ಭಟ್ಕಳ ತಾಲ್ಲೂಕಿನ ಅಳ್ವೇಕೋಡಿ ಬಳಿಯ ಸಮುದ್ರದಲ್ಲಿ ಪತ್ತೆಯಾಗಿದೆ.
ಘಟನೆ ನಡೆದ ಕಳೆದ ಏಳು ದಿನಗಳಿಂದ ಕಾಣೆಯಾದವನಿಗಾಗಿ ಹೆಲಿಕಾಪ್ಟರ್ ಬಳಸಿ ಶೋಧ ನಡೆಸಲಾಗಿತ್ತು ,ಇಂದು ಸ್ಥಳೀಯ ಮೀನುಗಾರರ ಮಾಹಿತಿ ಆಧಾರದಲ್ಲಿ ಕೋಸ್ಟ್‌ಗಾರ್ಡ್ ಸಿಬ್ಬಂದಿಗಳು ಶವವನ್ನು ಪತ್ತೆ ಮಾಡಿದ್ದಾರೆ.
21ರಂದು ಕೂರ್ಮಗಡ ದ್ವೀಪದ ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ವೇಳೆ 35 ಜನರಿದ್ದ ಬೋಟ್ ಕಾರವಾರದ ತೀರದ ಸಮೀಪ ಮುಳುಗಡೆಯಾಗಿತ್ತು.
ಬೋಟ್‌ನಲ್ಲಿದ್ದ 19 ಮಂದಿ ರಕ್ಷಿಸಲಾಗಿದ್ದು ಕಾಣೆಯಾಗಿದ್ದ 16 ಮಂದಿ ಪೈಕಿ ಕೊನೆಯ ಬಾಲಕನ ಶವ ಇದಾಗಿದ್ದು ಶವ ಪತ್ತೆಮಾಡಲಾಗಿದ್ದು ಕಾರವಾರ ಜಿಲ್ಲಾಸ್ಪತ್ರೆಗೆ ಬಾಲಕನ ಶವ ರವಾನಿಸಲಾಗಿದೆ.