ಹೊನ್ನಾವರ: ಯೋಜನಾ ಉದ್ಯೋಗ ಮಿನಿಮಯ ಕಚೇರಿ, ಕಾರವಾರ ಇವರಿಂದ ದಿನಾಂಕ 03-02-2019ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಹೊನ್ನಾವರದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಹೊನ್ನಾವರ ಎಸ್‍ಡಿಎಂ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯುವ ಈ ಉದ್ಯೋಗ ಮೇಳದಲ್ಲಿ 20ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿದ್ದು ಎಸ್.ಎಸ್.ಎಲ್.ಸಿ, ಡಿಪ್ಲೊಮಾ, ಪಿಯುಸಿ, ಐಟಿಐ, ಪದವಿ, ಬಿಎಸ್‍ಸಿ ನರ್ಸಿಂಗ್, ಜಿಎನ್‍ಎಂ ನರ್ಸಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆಯ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಯೋಜನಾ ಉದ್ಯೋಗ ಮಿನಿಮಯ ಕಚೇರಿ, ಕಾರವಾರ, ದೂರವಾಣಿ 9481403800, 9481274298 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.