ಅಂಕೋಲಾ : 2018-19ನೇ ಸಾಲಿನ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ, ಶೇಟಗೇರಿ, ಅಂಕೋಲಾದಲ್ಲಿ ನಡೆದ 57ನೇ ಜಿಲ್ಲಾ ಮಟ್ಟದ ಚರ್ಚಾ ಸ್ಫರ್ಧೆಯಲ್ಲಿ ವೀಣಾ ನಾಯ್ಕ ಹಾಗೂ ಪ್ರಜ್ವಲ್ ನಾಯ್ಕ ಭಾಗವಹಿಸಿದ್ದು, ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಕು. ವೀಣಾ ನಾಯ್ಕ್ಕ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಈ ಹಿಂದೆಯು ಇಲಾಖಾ ವತಿಯಿಂದ ನಡೆಸಲ್ಪಟ್ಟ ಅನೇಕ ಭಾಷಣ ಸ್ಪರ್ಧೆಯಲ್ಲಿ ವಿಭಾಗ ಮಟ್ಟದವರೆಗೂ ಶಾಲೆಯಿಂದ ಪ್ರತಿನಿಧಿಸಿರುತ್ತಾಳೆ. ಇವಳಿಗೆ ನಮ್ಮ ಶಾಲೆಯ ಶಿಕ್ಷಕಿಯಾದ ಶ್ರೀಮತಿ ರೇಷ್ಮಾ ನಾಯಕ ಇವರು ತರಬೇತಿ ನೀಡಿರುತ್ತಾರೆ.
ಸಾಧನೆಗೈದ ಇವರಿಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಯವರು, ಮುಖ್ಯಾಧ್ಯಾಪಕರಾದ ಶ್ರೀಮತಿ ಮಮತಾ ಭಟ್ಕಳ ಮತ್ತು ಶಿಕ್ಷಕ ವೃಂದದವರು ಹಾಗೂ ಊರ ನಾಗರಿಕರು ಅಭಿನಂದಿಸಿರುತ್ತಾರೆ.