ಕುಮಟಾ : ಕನ್ನಡ ಸಾಹಿತ್ಯ ಪರಿಷತ್ತು ಕುಮಟಾ ಘಟಕವು ಕತಗಾಲ ಅಕ್ಷರಕಲಾ ಯುವಕ ಸಂಘದ ಸಹಯೋಗದಲ್ಲಿ ಫೆಬ್ರವರಿ 16 ಮತ್ತು 17 ರಂದು ಕತಗಾಲ ಎಸ್.ಕೆ.ಪಿ.ಮೈದಾನದಲ್ಲಿ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿತು. ಅಕ್ಷರಕಲಾ ಯುವಕ ಸಂಘವು ಕಳೆದ ವರ್ಷ ಗುಡೇಅಂಗಡಿಯಲ್ಲಿ ನಡೆದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ವರ್ಷ ತಾವು ಸಂಘಟಿಸುವುದಾಗಿ ಪರಿಷತ್ತಿಗೆ ಮನವಿ ಮಾಡಿಕೊಂಡು ಸಂಘಟಿಸುವ ಜವಾಬ್ದಾರಿ ತೆಗೆದುಕೊಂಡು ವೇದಿಕೆಯಲ್ಲಿ ಕನ್ನಡ ಧ್ವಜವನ್ನು ಹೊತ್ತುತಂದಿತ್ತು. ಅದರ ಆಶಯದಂತೆ ಇತ್ತೀಚೆಗೆ ಕತಗಾಲನಲ್ಲಿ ನಡೆದ ಕ.ಸಾ.ಪ ಮತ್ತು ಸಾರ್ವಜನಿಕರ ಸಭೆಯಲ್ಲಿ ಈ ವರ್ಷ ಬಹಳ ಅದ್ದೂರಿಯಾಗಿ ತಾಲೂಕು 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಸ್.ಕೆ.ಪಿ ಮೈದಾನದಲ್ಲಿ ನಡೆಸಲು ನಿರ್ಣಯಿಸಲಾಗಿದೆ ಎಂದು ಕ.ಸಾ.ಪ ತಾಲೂಕು ಅಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ತಿಳಿಸಿದ್ದಾರೆ. ಸಭೆಯಲ್ಲಿ ಅಕ್ಷರಕಲಾ ಯುವಕ ಸಂಘದ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ, ಎಸ್.ಎಂ.ಭಟ್, ಕೃಷ್ಣ ಭಟ್, ಮಹೇಂದ್ರ ನಾಯ್ಕ, ದೀಪಕ ನಾಯ್ಕ, ದೇವು ಗೌಡ, ಗಣಪತಿ ಗೌಡ, ಕೆ.ಎನ್.ಮಂಜು, ದಿನೇಶ ಶಾನಭಾಗ, ಡಿ,ಎನ್.ಭಂಡಾರಿ, ಎಂ.ಎಂ.ನಾಯ್ಕ, ಸದಾನಂದ ಕಾಮತ, ವಿನಾಯಕ ಶಾನಭಾಗ, ಮಾರುತಿ ಮುಕ್ರಿ, ಮಹೇಶ ನಾಯ್ಕ ಮೊದಲಾದವರು ಹಾಜರಿದ್ದರು.

RELATED ARTICLES  ಅಕ್ಟೋಬರ್ 19 ರಂದು “ಭಾಷಾಂತರಂಗ’ ಕಾರ್ಯಕ್ರಮ : ‘ಕಾಸರಗೋಡು ಚಿನ್ನಾ’ ಜೊತೆಗೆ ಮುಕ್ತ ಮಾತು.

ಕಥೆ/ಕವನ ಸ್ಪರ್ಧೆ :
ಕುಮಟಾ : ಕತಗಾಲದಲ್ಲಿ ನಡೆಯುವ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕಿನ ವಿದ್ಯಾರ್ಥಿಗಳಿಗೆ, ಶಿಕ್ಷಕರುಗಳಿಗೆ ಮತ್ತು ಮುಕ್ತವಾಗಿ ಹೀಗೆ 3 ವಿಭಾಗದಲ್ಲಿ ಪ್ರತ್ಯೇಕ ಕಥೆ/ಕವನ ಸ್ಪರ್ಧೆ ಏರ್ಪಡಿಸಲಗಾಗಿದೆ. ವಿದ್ಯಾರ್ಥಿವೃಂದದಲ್ಲಿ ಪ್ರಾಥಮಿಕ-ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿ ಎಂಬ ಎರಡು ವಿಭಾಗವಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲಾ ದೃಢೀಕರಣ ಲಗತ್ತಿಸುವುದು. ಆಸಕ್ತರು ಫೆಬ್ರವರಿ 10 ರೊಳಗೆ ಎ4 ಅಳತೆಯ ಒಂದೇ ಮಗ್ಗುಳಲ್ಲಿ ಅಂದವಾದ ಕೈಬರಹದೊಂದಿಗೆ ಇಲ್ಲವೆ ಟೈಪ್ ಮಾಡಿಸಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವುದು. ತಮ್ಮ ಹೆಸರು, ವಿಳಾಸ, ಭಾವಚಿತ್ರ ಮತ್ತು ಯಾವವಿಭಾಗ ಎಂಬುದನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸುವುದು. ವಾಟ್ಸಪ್ ನಲ್ಲಿ ಕಳುಹಿಸಿದ ಅಥವಾ ತಡವಾಗಿ ಬಂದವುಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಕಥೆ/ಕವನ ಕಳುಹಿಸಿಕೊಡುವ ವಿಳಾಸ.ಡಾ.ಶ್ರೀಧರ ಗೌಡ. ಉಪ್ಪಿನಗಣಪತಿ. ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು. ಉಪ್ಪಿನಗಣಪತಿ ರಸ್ತೆ. ಕುಮಟಾ (ಉ.ಕ) 581343. ಮೊ: 9449477469. ಕಥೆ/ಕವನದ ಲಕೋಟೆಯ ಮೇಲೆ ಸ್ಪಷ್ಟವಾಗಿ ಯಾವ ವಿಭಾಗವೆಂದು ನಮೂದಿಸುವುದು

RELATED ARTICLES  ಶಿರಸಿಯಲ್ಲಿ ಕಾರುಗಳ ನಡುವೆ ಅಪಘಾತ: ಚಾರ್ಟೆಡ್ ಅಕೌಂಟೆಂಟ್ ಶಿವಾನಂದ ಹೆಗಡೆ ಸಾವು: ಐವರಿಗೆ ಗಂಭೀರ ಗಾಯ