ಮೇಷರಾಶಿ:- ವರ್ಚಸ್ಸನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗುವ ಒಳ್ಳೆಯ ಅವಕಾಶಗಳು ನಿಮಗೆ ಹೇರಳವಾಗಿ ದೊರೆಯುವವು. ಬರುವ ಅವಕಾಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಿ ಒಳಿತಾಗುವುದು.
ವೃಷಭ:- ಕಾರ್ಯಗಳು ಸುಗಮವಾಗಿ ನಡೆಯುವವು. ಸಂಗಾತಿಯ ಸಕಾಲಿಕ ಸಹಕಾರವು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುವುದು. ಬಂಧುಗಳು ನಿಮ್ಮಕುರಿತು ಪ್ರಶಂಸೆಯ ಮಾತುಗಳನ್ನು ಆಡುವರು.
ಮಿಥುನ:- ಸಣ್ಣಪುಟ್ಟ ವಿಚಾರಗಳೇ ಬೃಹದಾಕಾರವಾಗಿ ಬೆಳೆದು ತಲೆನೋವು ಉಂಟು ಮಾಡುವವು. ಹಾಗಾಗಿ ಸಣ್ಣ ವಿಚಾರಗಳನ್ನು ಕೆದಕಿ ದೊಡ್ಡ ರಂಪಾಟ ಮಾಡಿಕೊಳ್ಳದೆ ಅದನ್ನು ಮೂಲದಲ್ಲಿಯೇ ಚಿವುಟಿ ಹಾಕಿ. ಇದರಿಂದ ಒಳಿತಾಗುವುದು.
ಕಟಕ:- ಗುರುವಿನ ಒಲುಮೆ ಇರುವಾಗ ಯಾವ ಭಯವೂ ಇಲ್ಲ. ಧೈರ್ಯವಾಗಿ ಮುನ್ನುಗ್ಗಿ ಕಾರ್ಯ ಪ್ರವೃತ್ತರಾಗಿ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆ ಮೀರಿ ಆದಾಯ ಬರುವ ಸಾಧ್ಯತೆ ಇದೆ.
ಸಿಂಹ:- ನೇರವಾಗಿ ಬರುವ ಅನಿಷ್ಟಗಳನ್ನು ಎದುರಿಸಬಹುದು. ಆದರೆ ಹಿಂದಿನಿಂದ ಬರುವುದನ್ನು ತಪ್ಪಿಸಿಕೊಳ್ಳಲಾರಿರಿ. ಆದಾಗ್ಯೂ ದೈವಬಲದಿಂದ ನಿಮಗೆ ಕಾಲಕಾಲಕ್ಕೆ ಉತ್ತಮ ಪರಿಹಾರ ಮಾರ್ಗಗಳು ಗೋಚರಿಸುವುದರಿಂದ ಅನುಕೂಲವಾಗುವುದು.
ಕನ್ಯಾ:- ಬರುತ್ತಿರುವ ನಿರಂತರ ಆದಾಯಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಆದರೆ ಗುರು ಹಿರಿಯರ ಆಶೀರ್ವಾದದಿಂದ ನಿಮ್ಮ ಜೀವನದ ಮೇಲೆ ದುಷ್ಟ ಪ್ರಭಾವ ಬೀರುವುದಿಲ್ಲ.
ತುಲಾ:- ವಿಶೇಷವಾದ ಕಾರ್ಯ ರೂಪಿಸಿಕೊಳ್ಳಲು ಹಿರಿಯರಿಂದ ಬೆಂಬಲ ದೊರೆಯುವುದು. ದುಡಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಇಲ್ಲವೆ ಮುಂದಿನ ದಿನಗಳಲ್ಲಿ ಕಷ್ಟಪಡಬೇಕಾಗುವುದು.
ವೃಶ್ಚಿಕ:- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯ ಅರ್ಥ ನಿಮಗಿಂದು ಅರಿವಿಗೆ ಬರುವುದು. ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುತ್ತೇವೆಂದು ಹೇಳಿದ್ದ ಶ್ರೀಮಂತ ಸ್ನೇಹಿತ ನಿಮ್ಮಿಂದ ದೂರ ಸರಿಯುವನು.
ಧನುಸ್ಸು:- ಸದಾಕಾಲವೂ ಕಷ್ಟವೇ ಇರುವುದಿಲ್ಲ. ನಿಮ್ಮ ತಿಳಿವಳಿಕೆಗೆ ಮೀರಿದ ಉತ್ತಮ ಶಕ್ತಿಯೊಂದು ನಿಮ್ಮನ್ನು ಅನುಗ್ರಹಿಸಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಸಂತೋಷ ದೊರೆಯುವುದು.
ಮಕರ:- ಗೆಳೆಯರ ಜೊತೆಯಲ್ಲಿ ಕಷ್ಟ ಹಂಚಿಕೊಳ್ಳಿ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಇರಲಿ. ನಿಮಗೆ ಪರೀಕ್ಷೆಯ ಕಾಲ. ಭಗವಂತನ ಅನುಗ್ರಹದಿಂದ ಎದುರಾಗುವ ಸಂಕಟದಿಂದ ಪಾರಾಗುವಿರಿ.
ಕುಂಭ:- ನಿಮ್ಮ ಕುಟುಂಬದವರ ಜತೆ ಸಂತೋಷದಿಂದ ಇರಲು ಕಾಲ ಸಹಕಾರಿಯಾಗಿದೆ. ನಿಮ್ಮ ಮನೋಕಾಮನೆಗಳು ಒಂದರ ನಂತರ ಮತ್ತೊಂದು ಪೂ0ರ್ಣವಾಗುವವು. ಈ ಬಗ್ಗೆ ಚಿಂತೆ ಬೇಡ.
ಮೀನ:- ಮನುಜ ಬಯಸುವುದು ಒಂದು ಆದರೆ ದೈವ ಬಗೆಯುವುದು ಮತ್ತೊಂದು ಎನ್ನುವಂತೆ ಎಲ್ಲವೂ ಸರಿ ಇದೆ ಎನ್ನುವಾಗಲೇ ದಿಢೀರನೆ ಸಂಕಟವೊಂದು ಎದುರಾಗುವುದು. ಧೈರ್ಯಗೆಡದಿರಿ.