ಸಿದ್ದಾಪುರ: ಮಂಗಳವಾರ ನಿಧನರಾದ ನಾಡಿನ ಹಿರಿಯ ಸಾಹಿತಿ ಆರ್.ಪಿ.ಹೆಗಡೆ ಸೂಳಗಾರ ಮನೆಗೆ ಉತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತೆರಳಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2017ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಆರ್.ಪಿ.ಹೆಗಡೆ ಅವರಿಗೆ ಪ್ರದಾನ ಮಾಡಿದ ಸಂದರ್ಭದಲ್ಲಿ ಸಿದ್ದಾಪುರದ ಬಾಲಭವನದಲ್ಲಿ ಹಮ್ಮಿಕೊಂಡ ಸಮಾರಂಭಕ್ಕೆ ಅನಾರೋಗ್ಯದ ನಡುವೆಯೂ ಕೆಲ ಹೊತ್ತಿನ ಮಟ್ಟಿಗೆ ಅವರು ಬಂದು ಪ್ರಶಸ್ತಿ ಸ್ವೀಕರಿಸಿದ ವಿನಯವನ್ನು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ನೆನಪಿಸಿಕೊಂಡರು.

RELATED ARTICLES  ಮುಂದಿನ‌ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ.


ಈ ಸಂದರ್ಭದಲ್ಲಿ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ ಅವರು ಅರವಿಂದ ಕರ್ಕಿಕೋಡಿ ಅವರ ಜೊತೆಗಿದ್ದರು.
ಆರ್.ಪಿ.ಹೆಗಡೆ ಅವರ ಹುಟ್ಟೂರು ವಾಜಗದ್ದೆ ಬಳಿಯ ಸೂಳಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

RELATED ARTICLES  ಡಿ. 2 ರಿಂದ ‘ಕುಮಟಾ ರೋಟರಿ ಉತ್ಸವ’


ಅಂತಿಮ ನಮನ: ಸಿದ್ದಾಪುರದಲ್ಲಿನ ಆರ್.ಪಿ.ಹೆಗಡೆ ಅವರ ಮನೆಗೆ ಶ್ರೀ ಶಂಕರ ಮಠದ ಧರ್ಮದರ್ಶಿ ವಿ.ಜಿ.ಹೆಗಡೆ, ಮುಖಂಡ ಶಶಿಭೂಷಣ ಹೆಗಡೆ, ತಾಲೂಕು ಕ.ಸಾ.ಪ. ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ, ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಮುಂತಾದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.