ಕುಮಟಾ: ಭಾರತ ಸಂಸ್ಕøತಿ ಪ್ರತಿಷ್ಠಾನ ನಡೆಸಿದ ಮಹಾಭಾರತ ಪರೀಕ್ಷೆಯಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ 9 ನೆಯ ತರಗತಿ ಓದುತ್ತಿರುವ ಕುಮಾರಿ ರಕ್ಷಿತಾ ಗೋಪಾಲ ಪಟಗಾರ ಜಿಲ್ಲೆಗೆ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ.
ಪ್ರತಿಷ್ಠಾನದ ಕುಲಾಧಿಪತಿ ಚರಮೂರ್ತಿ ಶಿವರುದ್ರ ಸ್ವಾಮೀಜಿ ಮತ್ತು ಕುಲಪತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಹಸ್ತಾಕ್ಷರವುಳ್ಳ ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕ ಲಭಿಸಿದೆ. ಭಾರತೀಯ ಸಂಸ್ಕøತಿ ಪರಂಪರೆ ರಕ್ಷಣೆಗೆ ಸದಾ ಕೈ ಜೋಡಿಸುತ್ತಿರುವ ಹಾಗೂ ಎಳೆಯ ಮನಸ್ಸುಗಳಿಗೆ ಮಹಾಕಾವ್ಯಗಳ ಮೌಲ್ಯವನ್ನು ಗ್ರಹಿಸುವಂತೆ ಸಿದ್ಧಪಡಿಸುವ ಪ್ರಯತ್ನದಲ್ಲಿ ಅನನ್ಯ ಪಾತ್ರವಹಿಸುತ್ತಿರುವುದಕ್ಕಾಗಿ ಶಾಲಾ ಮುಖ್ಯ ಶಿಕ್ಷಕ ಎನ್.ಆರ್.ಗಜು ಮತ್ತು ಸಂಚಾಲಕ ಶಿಕ್ಷಕ ಪ್ರದೀಪ ನಾಯ್ಕ ಅವರಿಗೆ ಪ್ರಶಂಸಾ ಪತ್ರ ನೀಡಿ ಪ್ರತಿಷ್ಠಾನವು ಗೌರವಿಸಿದೆ.