ಶಿರಸಿ:  ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿ ನಗರ ಠಾಣೆಯ ಪೊಲೀಸರು ಈರ್ವರನ್ನು ಬಂಧಿಸಿದ ಘಟನೆ ನಗರದ ಬಿಡ್ಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಡೆದಿದೆ.

ಆರೋಪಿಗಳಿಂದ 12300ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ ಚನ್ನಬಸಪ್ಪ ಅಂಗಡಿ ಹಾಗೂ ರಮೇಶ ಶಿವಮೂರ್ತಿ ಹೊಂಬಾಳೆ ಗಾಂಧಿನಗರ ಎಂಬುವರನ್ನು ಬಂಧಿಸಿದ್ದು ಆರೋಪಿತರಿಂದ ನಗದು ಹಾಗೂ ಮಟಕಾ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

RELATED ARTICLES  ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಅದರಂತೆ ನಗರದ ಹನುಮಗಿರಿಯಲ್ಲಿ ಮಟಕಾ ಆಡಿಸುತ್ತಿದ್ದ ಓರ್ವನನ್ನು ಬಂಧಿಸಿ ಆತನಿಂದ ಮಟಕಾ ಸಾಮಾಗ್ರಿ ಹಾಗೂ ನಗದು 4400ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಅನಿಲ ಶಂಬು ಕುರುಬರ ಬಂಧಿತ ಆರೊಪಿಯಾಗಿದ್ದು ಸಿ.ಪಿ.ಐ. ಗಿರೀಶ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

RELATED ARTICLES  ನವಿಲಗೋಣ ಭಾಗದ ಕಾರ್ಯಕರ್ತರಿಂದ ಶಾಸಕ ದಿನಕರ ಶೆಟ್ಟಿ ಅವರಿಗೆ ಅಭಿನಂದನೆ.

ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದಾರೆ.