ಹೊನ್ನಾವರ: ತಾಲೂಕಿನ ಹಳದೀಪುರದ ಸಮೀಪ ಅಗ್ರಹಾರದ ನವಿಲಗೋಣ ಕ್ರಾಸ್ ಬಳಿ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಇಂದು 05-00 ಗಂಟೆಗೆ ಸುಧಾಕರ ನಾರಾಯಣ ಹರಿಕಂತ್ರ ತಾರಿಬಾಗಿಲು ಇತನು ಬೈಕ್ ನಂಬರ್ KA47 R 2603 ನಲ್ಲಿ ಪ್ರಯಾಣ ನಡೆಸಿದ್ದ . ಹಿಂಬದಿಯಲ್ಲಿ ಮಂಜುನಾಥ ವೆಂಕಟ್ರಮಣ ಹರಿಕಂತ್ರ ಎಂಬ ದಾರೇಶ್ವರದ ವ್ಯಕ್ತಿ ಇದ್ದ ಎನ್ನಲಾಗಿದೆ. ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಹೋಗುತ್ತಿರುವಾಗ ನವಿಲಗೋಣ ಕ್ರಾಸ್ ಸಮೀಪ ಅತೀ ವೇಗವಾಗಿ ಬಂದ ಕಂಟನರ್ ಹೊಡೆದು ಅಪಘಾತದಲ್ಲಿ ಮಂಜುನಾಥ ಎಂಬುವವರು ಮೃತ ಪಟ್ಟಿರುವುದಾಗಿ ವರದಿಯಾಗಿದೆ.