ಮೇಷ:- ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯ ಪ್ರವೃತ್ತರಾಗಿ. ಸಮಾಜವನ್ನು ತಿದ್ದುವ ಉಸಾಬರಿ ತೆಗೆದುಕೊಂಡು ಅವಮಾನಕ್ಕೆ ಪಾತ್ರರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದ್ದು ಈ ಬಗ್ಗೆ ಜಾಗ್ರತೆ ಅಗತ್ಯ.


ವೃಷಭ:- ನಿಮ್ಮ ಬದುಕಿನ ಕನಸೊಂದು ಕೆಲವು ರಾಜಿಗಳೊಡನೆ ಈಡೇರಲು ಸಾಧ್ಯವಾಗುತ್ತದೆ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಕೆಲವರು ನಿಮ್ಮಿಂದ ಹಣದ ಪ್ರತಿಫಾಲಾಪೇಕ್ಷೆ ಬಯಸುವರು. ಅವರಿಗೆ ಸುತಾರಾಂ ಹಣ ನೀಡಿದಿರಿ.

ಮಿಥುನ:- ಅತ್ಯಂತ ಮೇಧಾವಿ ಆದ ನೀವು ಕೆಲವೊಮ್ಮೆ ನಿಮ್ಮ ಹಠಮಾರಿತನದಿಂದ ಬಂದ ಉತ್ತಮ ಅವಕಾಶ ಕಳೆದುಕೊಳ್ಳುವಿರಿ. ಬಹು ದೊಡ್ಡ ಬಂಡವಾಳದೊಂದಿಗಿನ ವ್ಯವಹಾರಗಳ ಬಗ್ಗೆ ಸಂಯಮ ಇರಲಿ.

ಕಟಕ:- ಹಲವು ತಪ್ಪುಗಳು ನಿಮ್ಮನ್ನು ಪಾಪಪ್ರಜ್ಞೆಯಲ್ಲಿ ಇರಿಸುವುದು. ಇದನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ. ಹಿರಿಯರ ಆಶೀರ್ವಾದದಿಂದ ಮಾನಹಾನಿ ಪ್ರಸಂಗ ಬರುವುದಿಲ್ಲ.

ಸಿಂಹ:- ಅನವಶ್ಯಕ ಕೆಲಸ ಮಾಡಲು ಮುಂದಾಗುವಿರಿ. ಇದರಿಂದ ಮನೆಯ ಸದಸ್ಯರಿಂದಲೇ ಟೀಕೆಗೆ ಒಳಗಾಗುವಿರಿ. ಕೆಲವು ವೇಳೆ ಅತಿ ಸಣ್ಣತನ ತೋರಿ ಅಪಹಾಸ್ಯಕ್ಕೆ ಈಡಾಗುವಿರಿ. ನಿಮ್ಮ ವಿದ್ಯೆ, ವಯಸ್ಸಿಗೆ ತಕ್ಕಂತೆ ಗಂಭೀರವಾಗಿರಿ.

RELATED ARTICLES  ಬಜೆಟ್ ಮಂಡನೆಗೆ ಮುನ್ನ ಷೇರುಪೇಟೆ ಸಂವೇದಿ ಸೂಚ್ಯಂಕ ಏರಿಕೆ

ಕನ್ಯಾ:- ಹಿರಿಯರ ಬಳಿ ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಿ. ಅವರಿಂದ ನಿಮಗೆ ಸೂಕ್ತ ಪರಿಹಾರ ಸಿಗುವುದು. ಮಗನ ನೌಕರಿ ವಿಷಯದಲ್ಲಿ ಶುಭವಾರ್ತೆ ಕೇಳುವಿರಿ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ತುಲಾ:- ಸಿಟ್ಟು ಮಾನವನ ಮೊದಲ ಶತ್ರು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಾಳ್ಮೆಯನ್ನು ತಮ್ಮ ಅಸ್ತ್ರವನ್ನಾಗಿ ಉಪಯೋಗಿಸಿಕೊಳ್ಳಬೇಕು. ಇಲ್ಲದೆ ಇದ್ದಲ್ಲಿ ಕೆಲವು ನಿರ್ಣಯಗಳು ನಿಮ್ಮನ್ನು ಪೇಚಿಗೆ ಸಿಲುಕಿಸುವವು.

ವೃಶ್ಚಿಕ:- ಯಾವ ದಿಕ್ಕಿಗೆ ಹೋದರೂ ನೆಮ್ಮದಿ ಇಲ್ಲ. ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎನ್ನುವಂತಾಗಿದೆ. ತಾಳ್ಮೆಯಿಂದ ಇರಿ. ಧೈರ್ಯ ಕಳೆದುಕೊಳ್ಳಬೇಡಿ. ಕತ್ತಲು ಕಳೆದ ಮೇಲೆ ಉಜ್ವಲ ಬೆಳಗಿನ ಆಗಮನ ಆಗಲೇಬೇಕು.

RELATED ARTICLES  ಸಾಲ ಮನ್ನಾ ವಿಚಾರದಲ್ಲಿ ಮೋಸ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮ.

ಧನುಸ್ಸು:- ನಿಧಾನವೇ ಪ್ರಧಾನ ಎಂಬ ಮಾತಿದೆ. ಅಂತೆಯೇ ಒಂದು ಬಾರಿ ಅವಘಡದಿಂದ ಪಾರಾಗುವಿರಿ. ಅದಕ್ಕೆ ಕಾರಣ ನಿಮ್ಮ ನಿಧಾನ ಪ್ರವೃತ್ತಿಯೇ ಆಗಿರುತ್ತದೆ. ಹಾಗಾಗಿ ಯಾವುದೇ ವಿಷಯಕ್ಕೂ ಅವಸರಿಸಬೇಡಿ.

ಮಕರ:- ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಕೊರಗುವಿರಿ. ನಿಮ್ಮ ಹಿರಿಯರು ಕೂಡಾ ನಿಮ್ಮ ಬಗ್ಗೆ ಇದೇ ಮಾತನ್ನು ಆಡುವರು. ಕಾಲಗರ್ಭದಲ್ಲಿ ಇತಿಹಾಸ ಪುನಾರಾವರ್ತನೆ ಆಗುತ್ತದೆ. ಅದಕ್ಕಾಗಿ ಬೇಸರ ಮಾಡಿಕೊಳ್ಳದಿರಿ. ಪ್ರೀತಿಯಿಂದ ಮಕ್ಕಳನ್ನು ತಿದ್ದಿ.

ಕುಂಭ:- ಯಾರ ವ್ಯಕ್ತಿತ್ವವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಜಗತ್ತಿನ ಪ್ರತಿಯೊಂದು ವಸ್ತುವು ತನ್ನದೆ ಆದ ವೈಶಿಷ್ಯದಿಂದ ಕೂಡಿರುತ್ತದೆ. ಜನರಲ್ಲಿನ ಉತ್ತಮ ಗುಣಗಳನ್ನು ಮಾತ್ರ ಗುರುತಿಸಿ ನಡೆದಲ್ಲಿ ನಿಮಗೆ ಅನುಕೂಲವಾಗುವುದು.

ಮೀನ:- ಪ್ರತಿರೋಧಗಳ ಮಧ್ಯೆಯೂ ಗೆಲ್ಲುವ ಅವಕಾಶ ನಿಮಗೆ ಲಭಿಸುವುದು. ಗುರು ಹಿರಿಯರ ಆಶೀರ್ವಾದದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆರ್ಥಿಕ ಸ್ಥಿತಿ ಸಾಧಾರಣದಿಂದ ಉತ್ತಮಮಟ್ಟಕ್ಕೆ ಹೋಗುವುದು.