ಯಲ್ಲಾಪುರ; “ನಮ್ಮ ದೇಸಿ ನೆಲದ ಸಂಸ್ಕೃತಿಯ ಪಾರಂಪರಿಕ ಕೊಡುಗೆಯಾಗಿ ಯಕ್ಷಗಾನ ಇಂದಿಗೂ ಜೀವಂತವಾಗಿದೆ. ಚಲನಶೀಲವಾದ ಬದುಕಿನ ಅರ್ಥಕ್ಕೆ ಸಾಕ್ಷರೂಪವಾಗಿ ಯಕ್ಷಗಾನ ಸಾಹಿತ್ಯ ಉತ್ತಮ ಸಂದೇಶಗಳನ್ನು ಈ ಜಗತ್ತಿಗೆ ಕೊಟ್ಟಿದೆ. ನವರಸಗಳನ್ನು ಅಭಿವ್ಯಕ್ತಿಸುವ ವಿಶಿಷ್ಟವಾದ ಕಲೆ ಇದಾಗಿದ್ದು ಯುವ ಪೀಳಿಗೆ ಹೆಚ್ಚಿನ ಆಸಕ್ತಿಯನ್ನು ಈ ಕಲೆ ಉಳಿಸುವಲ್ಲಿ ತೋರಬೇಕಾಗಿದೆ ಎಂದು ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ವಿಜೇತ ಅನಂತ ದಂತಳಿಗೆ ಅಭಿಪ್ರಾಯಪಟ್ಟರು.
ವಜ್ರಳ್ಳಿಯ ಸರ್ವೋದಯ ಸಭಾಭವನದಲ್ಲಿ ಕಲಾಸಕ್ತರಿಗಾಗಿ ವಾರ್ಷಿಕವಾದ ಉಚಿತ ಯಕ್ಷಗಾನ ತರಗತಿಗಳನ್ನು ಗೆಜ್ಜೆ ಪೂಜೆಯೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಕಲಿಕೆ ನಿರಂತರವಾದದ್ದು ಸತತ ಪರಿಶ್ರಮ, ಶ್ರದ್ಧೆಯಿಂದ ಮಾತ್ರ ಯಕ್ಷಗಾನ ಕಲೆ ಒಲಿಯಬಲ್ಲದು. ಯಕ್ಷಗಾನ ನೃತ್ಯ, ಸಂಗೀತ, ಮಾತುಗಳೊಂದಿಗೆ ಬೆಸೆದುಕೊಂಡಿರುವ ಸೃಜಶೀಲವಾದ ಆಭಿವ್ಯಕ್ತಿಯ ಮಾಧ್ಯಮ. ಆಂಗಿಕ ಆಭಿನಯಗಳು ದೇಹದ ಆರೋಗ್ಯವನ್ನು ಹೆಚ್ಚಿಸಬಲ್ಲದು. ಪೌರಾಣಿಕ ಪಾತ್ರಗಳ ಅಧ್ಯಯನ ಭೌಧ್ದಿಕವಾಗಿ ಜ್ಞಾನವನ್ನು ನೀಡಬಲ್ಲದಾಗಿದೆ, ಯಕ್ಷಗಾನ ಮನಂರಂಜನೆಯಾಗದೇ ಬೌದ್ದಿಕ ಕಲೋಪಾಸನೆಯಾಗಬೇಕು. ಸದಾಕಾಲ ಕಲಿಯುತ್ತಿರುವ ನಿರಂತರವಾದ ಪಕ್ರಿಯೆ ಈ ಕಲೆಯದ್ದಾಗಿದೆ. ಬಾಲ್ಯದಿಂದಲೇ ಯಕ್ಷಗಾನ ಕಲೆ ಕರಗತವಾದರೆ ಬದುಕಿನ ಒತ್ತಡಗಳ ನಡುವೆ ಮನಸ್ಸನ್ನು ಹಗುರಗೊಳಿಸುವ ಉತ್ತಮ ಹವ್ಯಾಸವಾಗಿದೆ ಎಂದು ಅನಂತ ದಂತಳಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ. ಸಂಗೀತ ಶಾಲೆಯ ಶಿಕ್ಷಕರಾದ ನರಸಿಂಹ ಗಾಂವ್ಕಾರ,ವಿನಯ ಕೋಮಾರ, ಚಂಡೆವಾದಕ ನಾರಾಯಣ ಕೋಮಾರ ಉಪಸ್ಥಿತರಿದ್ದರು. ದತ್ತಾತ್ರೇಯ ಭಟ್ಟ ಕಣ್ಣಿಪಾಲ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಯಕ್ಷಗಾನದ