ಕುಮಟಾ : ತಾಲೂಕಿನ ತಾಹಶಿಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಎರಡು ಸಾವಿರ ಲಂಚ ಸ್ವೀಕರಿಸುತಿದ್ದ ಭೂಮಿ ಕೇಂದ್ರದ ಶಿರಸ್ತೇದಾರರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

RELATED ARTICLES  ಮಕ್ಕಳಿಂದ ಮೊಬೈಲ್ ದೂರವಿಡಿ : ಸುಬ್ರಾಯ ವಾಳ್ಕೆ

   ಎಸಿಬಿ ಡಿ.ವೈ.ಎಸ್.ಪಿ ಗಿರೀಶ್ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದ್ದು ಈ ಸಂದರ್ಭದಲ್ಲಿ ಕುಮಟಾದ ಗಿರೀಶ್ ಎಂಬುವವರಲ್ಲಿ ವಾರಸುದಾರರ ಹೆಸರನ್ನು ಕಂಪ್ಯೂಟರ್ ನಲ್ಲಿ ಖಾತೆಗೆ ಸೇರಿಸಲು ಲಂಚ ಕೇಳಿದ್ದ ಸುರೇಶ್ ಉಪ್ಕುಂದ ಅವರ ಲಂಚಾವತಾರ ಹೊರಬಿದ್ದ ಬಗ್ಗೆ ತಿಳಿದು ಬಂದಿದೆ.

RELATED ARTICLES  ಬಿಡುಗಡೆಯಾಗಿದೆ "ಮಾಯಾವಿ "ಕಿರು ಚಿತ್ರದ ಟ್ರೈಲರ್: ಕುತೂಹಲ‌ ಮೂಡಿಸಿದ ಕುಮಟಾದ ಪ್ರತಿಭೆಗಳ ಚಿತ್ರ.

     ಈ ಬಗ್ಗೆ ಗಿರೀಶ್ ರವರ ದೂರು ಆದರಿಸಿ ದಾಳಿಯನ್ನು ಎಸಿವಿ ಅಧಿಕಾರಿಗಳು ನಡೆಸಿ ಹಣದ ಸಮೇತ ಆತನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆದಿದೆ.