ಮೇಷ:- ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗಿಂತ ಕಡಿಮೆ ಲಾಭ ಬರುವುದು. ಈ ಬಗ್ಗೆ ಹೆಚ್ಚು ಚಿಂತಿಸುವುದು ಬೇಡ. ಒಂದು ಬೊಗಸೆ ಅವರೆಕಾಳನ್ನು ದಾನ ಮಾಡಿ. ಗುರು ಮಂತ್ರ ಪಠಿಸಿ.

ವೃಷಭ:- ಸಾದಾ, ಸೀದಾ ವ್ಯಕ್ತಿಯಾಗಿರುವ ನಿಮ್ಮನ್ನು ಇತರರು ಮೋಸ ಮಾಡುವ ಇಲ್ಲವೆ ಯಾಮಾರಿಸುವ ಯೋಜನೆಯಲ್ಲಿರುವರು. ಹಾಗಾಗಿ ಎಲ್ಲರೆದುರು ನಿಮ್ಮತನ ಪ್ರದರ್ಶಿಸಬೇಡಿ. ಇದರಿಂದ ತೊಂದರೆಗಳಿಗೆ ಸಿಲುಕಿಕೊಳ್ಳುವಿರಿ.
ಮಿಥುನ:- ನಿಮ್ಮ ಕುಟುಂಬದ ಹಳೆಯ ಸ್ನೇಹಿತರ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುವವು. ಆದರೆ ಹಣಕಾಸಿನ ವಿಚಾರವನ್ನು ತೂಗಿಸಲು ಅನ್ಯರ ಬಳಿ ಸಾಲ ಮಾಡಬೇಕಾಗುವುದು. ಮಾತಿನಲ್ಲಿ ನಯ ವಿನಯ ರೂಢಿಸಿಕೊಳ್ಳಿ.

ಕಟಕ:- ಗುರುವಿನ ಶುಭ ದೃಷ್ಟಿಯಿದೆ. ಕೈಯಲ್ಲಿ ಯಥೇಚ್ಛವಾಗಿ ಹಣ ಹರಿದಾಡುತ್ತಿದೆ ಎಂದು ಮತ್ತೆ ಹಳೆಯ ದಾರಿ ಹಿಡಿಯಬೇಡಿ. ಉತ್ತಮ ಸ್ನೇಹಿತರ ಸಹವಾಸ ಮಾಡಿ. ಕೆಟ್ಟ ಸ್ನೇಹಿತರು ನಿಮ್ಮಲ್ಲಿರುವ ಹಣ ಖರ್ಚು ಮಾಡಲು ಚಿಂತಿಸುತ್ತಿರುವರು.

RELATED ARTICLES  ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ : ಹೃದಯಾಘಾತದಿಂದ ಕೊನೆಯುಸಿರೆಳೆದ ಖ್ಯಾತ ಪತ್ರಕರ್ತ

ಸಿಂಹ:- ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎನ್ನುವಂತೆ ಭಗವಂತನ ಒಲುಮೆ ಆಗುವವರೆಗೂ ಸುಮ್ಮನಿರುವುದು ಒಳ್ಳೆಯದು. ನಿಮ್ಮ ಘನತೆ, ಗೌರವವನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಮಾತಿನಲ್ಲಿ ಸಣ್ಣತನ ತೋರಿ ಸಣ್ಣವರಾಗಬೇಡಿ.

ಕನ್ಯಾ:- ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ನಿಮ್ಮ ವಿರೋಧಿಗಳು ಸಹ ನಿಮ್ಮ ಸ್ನೇಹ ಸಂಪಾದಿಸಲು ಹಾತೊರೆಯುವರು. ಈ ಹಿಂದೆ ದೂರವಾಗಿದ್ದ ಬಂಧುಗಳು ನಿಮ್ಮ ಸಖ್ಯ ಬೆಳೆಸಲು ಮುಂದೆ ಬರುವರು.

ತುಲಾ:- ದಿಢೀರ್‌ ಶ್ರೀಮಂತರಾಗಬೇಕೆಂಬ ಯೋಜನೆಗಳನ್ನು ಕೈಬಿಡಿ. ಇದೇ ತೆರನಾದ ಯೋಜನೆಗಳಿಂದ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿರುವಿರಿ. ನಿಮ್ಮ ಇತಿಮಿತಿಗಳನ್ನು ಅರಿತು ನಡೆಯುವುದು ಒಳ್ಳೆಯದು. ಹಣವನ್ನು ನೀರಿನಂತೆ ಖರ್ಚು ಮಾಡದಿರಿ.

ವೃಶ್ಚಿಕ:- ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಳೆಯ ಆದರ್ಶಗಳು ನಿಜಜೀವನಕ್ಕೆ ಉಪಯೋಗಕ್ಕೆ ಬರುವುದಿಲ್ಲ. ಕಾಲಕ್ಕೆ ತಕ್ಕಂತೆ ಕೊಡೆ ಹಿಡಿಯಬೇಕು ಎಂಬಂತೆ ವ್ಯಾಪಾರ ವ್ಯವಹಾರದಲ್ಲಿ ಕೆಲವೊಮ್ಮೆ ಮೋಸ ಮಾಡುವ ಪ್ರಸಂಗಗಳು ಎದುರಾಗುತ್ತವೆ.

RELATED ARTICLES  ದೇವರ ನಾಡು ಕೇರಳದಲ್ಲಿ ಮತ್ತೆ ಪ್ರವಾಹ ಭೀತಿ: 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

ಧನುಸ್ಸು:- ಪಾಲುಗಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗುವವು. ಇದರಿಂದ ವ್ಯವಹಾರದಲ್ಲಿ ನಷ್ಟ ಉಂಟಾಗುವುದು. ನಿಮಗೆ ಒಪ್ಪಿಗೆ ಇಲ್ಲದಿದ್ದಲ್ಲಿ ಪಾಲುಗಾರಿಕೆ ವ್ಯವಹಾರದಿಂದ ಹೊರಬನ್ನಿ.

ಮಕರ:- ವಿವಿಧ ರೀತಿಯ ಕೆಲಸಗಳು ನಿಮ್ಮ ಯೋಜನಾ ಸ್ವರೂಪದಲ್ಲಿ ಸೂಕ್ತ ಎನಿಸುವವು. ಗುರು ಲಾಭ ಸ್ಥಾನದಲ್ಲಿ ಸಂಚರಿಸುವ ಮೂಲಕ ಹೇರಳ ಧನಾಗಮನವನ್ನೇ ನೀಡುವನು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಕುಂಭ:- ಮನೆಯಲ್ಲಿ ಶಾಂತಿ ನೆಲೆಸುವುದು. ಕಚೇರಿಯ ಕೆಲಸದಲ್ಲಿ ಮೇಲಧಿಕಾರಿಗಳು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು. ಹಣಕಾಸಿನ ನೆರವು ದೊರೆಯುವುದು.

ಮೀನ:- ಸಿನಿಮಾ ಹಂಚಿಕೆದಾರರು, ನಿರ್ಮಾಪಕರು, ಫೈನಾನ್ಸಿಯರ್‌ಗಳು ಸೂಕ್ತ ದಾಖಲಾತಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಯಾರೋ ಮಾಡಿದ ತಪ್ಪಿಗೆ ಮತ್ತ್ಯಾರೋ ಶಿಕ್ಷೆಯನ್ನು ಅನುಭವಿಸುವಂತೆ ಆಗುತ್ತದೆ. ವ್ಯವಹಾರ ಪಾರದರ್ಶಕವಾಗಿರಲಿ.