ಭಟ್ಕಳ: ನಾಡಿನ ಹೆಸರಾಂತ ಹೃದ್ರೋಗ ತಜ್ಞ, ವೈದಕೀಯ ಸಂಶೋಧಕ, ಶಿಕ್ಷಣ ತಜ್ಞ, ಬರಹಗಾರ ಮಣ ಪಾಲ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಪದ್ಮಭೂಷಣ ಡಾ. ಬಿ.ಎಂ.ಹೆಗಡೆಯವರಿಗೆ ಇತ್ತೀಚೆಗೆ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.
ಭಾರತೀಯ ಆಯುರ್ವೇದ ಸತ್ವವನ್ನು ಎಲ್ಲೆಡೆ ಪ್ರಚುರಪಡಿಸುವ ಉದ್ದೇಶದಿಂದ ಲಂಡನ್ನಿನ ಥೇಮ್ಸ್ ವ್ಯಾಲಿ ವಿ.ವಿ.ಯಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜನ್ನು ಆರಂಭಿಸಿದ ಡಾ.ಬಿ.ಎಂ.ಹೆಗಡೆಯವರ ಸರ್ವಾಧÀ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯದಲ್ಲಿ ಇತ್ತೀಚೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಇಪ್ಪತ್ಮೂರನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಭಟ್ಕಳದ ನಿನಾದ ಸಾಹಿತ್ಯ ಸಂಗೀತ ಸಂಚಯದ ಪರವಾಗಿ ನಿನಾದ ಸಂಚಾಲಕ ಉತ್ತರ ಕನ್ನಡ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿಯವರು ಡಾ.ಹೆಗಡೆಯವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ್, ಖ್ಯಾತ ಮೂಳೆ ತಜ್ಞ ಡಾ. ಎಂ.ಶಾಂತಾರಾಮ ಶೆಟ್ಟಿ, ಧರ್ಮಸ್ಥಳ ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವರಾಜ ವಿ.ಪಾಟಿಲ್. ಡಾ.ವೀಣಾ ಪಾಲಚಂದ್ರ, ಆಯುರ್ವೇದ ತಜ್ಞೆ ಡಾ.ಆಶಾಜ್ಯೋತಿ ರೈ, ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಶಿವಪ್ರಸಾದ ಕೆ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.