ಕಾರವಾರ: ಶಿರಸಿ ತಾಲೂಕಿನ ಬನವಾಸಿಯಲ್ಲಿ ಕದಂಬೋತ್ಸವ ನಡೆಯುವ ಅಂಗಳದಲ್ಲಿಯೇ ಸತ್ತ ಮಂಗವೊಂದು ಪತ್ತೆಯಾಗಿದ್ದು ಅದು ಉಣ್ಣೆ ರೋಗದಿಂದಲೇ ಸತ್ತಿರುವುದ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಫೆ.9 ರಿಂದ ನಡೆಯಲಿರುವ ಪ್ರಸಕ್ತ ವರ್ಷದ ಕದಂಬೋತ್ಸವವನ್ನು ರದ್ದು ಪಡಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.


ಬನವಾಸಿ ಸಮೀಪದ ಬಾಶಿ ಗ್ರಾಮದ 27 ಮಕ್ಕಳು ಇತ್ತೀಚೆಗೆ ಅಸ್ವಸ್ಥರಾಗಿದ್ದು ಅವರಲ್ಲೂ ಕೂಡ ಮಂಗನ ಕಾಯಿಲೆಯ ಸೋಂಕು ಕಾಣ ಸಿಕೊಂಡಿತ್ತು ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಅಷ್ಟೇ ಅಲ್ಲ, ಸಿದ್ದಾಪುರದಲ್ಲೂ 2 ಜನ ಮಂಗನ ಕಾಯಿಲೆಯಿಂದ ಸತ್ತಿರುವುದರ ಜೊತೆಗೆ ಸಾಗರದಲ್ಲೂ 7 ಮಂದಿ ಸತ್ತಿದ್ದಾರೆ. ಬನವಾಸಿ, ಸಿದ್ದಾಪುರ, ಸಾಗರ ಇವೆಲ್ಲ ಒಂದೇ ಅರಣ್ಯ ಸೆರಗಿನಲ್ಲಿ ಬರುವುದರಿಂದ ಈಗಾಗಲೇ ಹಬ್ಬುತ್ತಿರುವ ಮಂಗನ ಕಾಯಿಲೆ ಗಂಭೀರತೆಯನ್ನು ಅರಿಯಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

RELATED ARTICLES  ನಾಳೆ ಕುಮಟಾದಲ್ಲಿ ನಡೆಯಲಿದೆ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ.


ಪ್ರತಿ ವರ್ಷ ಕದಂಬೋತ್ಸವವನ್ನು ಮಾಡಲೇಬೇಕು ಎಂಬುದು ಜಿಲಾ ಕ.ಸಾಪ. ಒತ್ತಾಯಿಸುತ್ತದೆ. ಆದರೆ ಈ ಸಲದ ಮಂಗನ ಕಾಯಿಲೆಯ ಆತಂಕ ಬನವಾಸಿಯಲ್ಲಿ ಹರಡಿಕೊಂಡಿರುವುದರಿಂದ ಈ ಪ್ರಸಕ್ತ ವರ್ಷದ ಕದಂಬೋತ್ಸವವನ್ನು ನಡೆಸುವುದು ಬೇಡ. ಕನ್ನಡ ಭಾಷೆ, ಕನ್ನಡದ ನೆಲದ ಬಗ್ಗೆ ಅಭಿಮಾನದಿಂದ ಕದಂಬೋತ್ಸವನ್ನು ನಡೆಸುವುದರ ಜೊತೆಗೆ ಕನ್ನಡಿಗರ ಆರೋಗ್ಯ ಮತ್ತು ಬದುಕು ಕೂಡ ಮುಖ್ಯ. ಅದಕ್ಕಾಗಿ ಸಾವಿರಾರು ಜನರು ಸೇರುವ ಈ ಕದಂಬೋತ್ಸವವನ್ನು ಈ ಸಲ ಕೈಬಿಡಬೇಕು. ಎಂದು ವಿನಂತಿಸಿದ ಅರವಿಂದ ಕರ್ಕಿಕೋಡಿ ಅವರು ಕದಂಬೋತ್ಸವದ ಸಂದರ್ಭದಲ್ಲಿ ಬಂದ ಜನರಿಗೆ ಮಂಗನ ಕಾಯಿಲೆಯ ಸೋಂಕು ತಗುಲಿದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.

RELATED ARTICLES  ಜೊತೆ ಜೊತೆಯಲ್ಲಿ ಪ್ರೇಯಸಿಗೆ, ಪ್ರಿಯತಮನ ಪುಷ್ಪಗುಚ್ಛ