ದಾಂಡೇಲಿ : ನಗರದ ಹಲವೆಡೆ ಮನೆಗಳಲ್ಲಿ ಕಳ್ಳತನ ಮಾಡಿ, ನಗರದಲ್ಲಿ ಭಯದ ವಾತವರಣಕ್ಕೆ ಕಾರಣರಾಗಿದ್ದ ಇಬ್ಬರು ಕಳ್ಳರನ್ನು ಮಾಲು ಸಹಿತ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಕಳೆದ ಮೇ ತಿಂಗಳಲ್ಲಿ ನಗರದ ಹಳೆದಾಂಡೇಲಿ ಹಾಗೂ ಅಂಬೇವಾಡಿಯಲಿ ಮನೆ ಕಳ್ಳತನವಾಗಿದ್ದು, ಕಳವಾಗಿರುವ ಆಭರಣಗಳನ್ನು ಆರೋಪಿ ಸಹಿತ ಬಂಧಿಸಲಾಗಿದೆ. ಕಳ್ಳತನ ಚಟುವಟಿಕೆಯ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದ ಪೊಲೀಸ್ ಇಲಾಖೆ ಸೋಮವಾರ ನಗರದ ಬಾಂಬೆಚಾಳ ನಿವಾಸಿ ಫೈರೋಜ್ ಅಬ್ದುಲ ಸತ್ತಾರ ದವಲತ್ತಿ ಮತ್ತು ಬಂಗೂರನಗರ ನಿವಾಸಿ ಆನಂದ ನಾಗನರಸಯ್ಯ ಬಲ್ಲಾ ಅವರುಗಳನ್ನು ಕಳವು ಮಾಡಿದ ವಸ್ತುಗಳೊಂದಿಗೆ ಬಂಧಿಸಿ, ನ್ಯಾಯಾಂಗಕ್ಕೆ ಹಾಜರು ಪಡಿಸಲಾಗಿದೆ.
ಬಂಧಿಸಿದ ಕಳ್ಳರಿಂದ ಕಳವುಗೈದಿದ್ದ ಬಂಗಾರದ ಚೈನು-01, ಬ್ರಾಸ್ ಲೈಟ್ -02, ಉಂಗುರ-01, ನೆಕ್ಲೇಸ್-01, ಖಡ-01, ಕಿವಿಯೋಲೆ ಮತ್ತು ಜುಮುಕಿ-01 ಜೊತೆ, ಲೇಡಿಸ್ ಕಿವಿ ಬಟನ್-01 ಜೊತೆ, ಬಾಸ್ಕೆಟ್ ಕಿವಿ ರಿಂಗ್-01, ಮಕ್ಕಳ ಕಿವಿ ರಿಂಗ್-1 ಜೊತೆ ಹಾಗೂ ಕಳ್ಳತನ ಚಟುವಟಿಕೆಗೆ ಉಪಯೋಗಿಸಿದ್ದ್ ಬಜಾಜ್ ಪಲ್ಸರ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್.ಪಿ.ವಿನಾಯಕ ಪಾಟೀಲ ಮತ್ತು ಹೆಚ್ಚುವರಿ ಎಸ್.ಪಿ ಗೋಪಾಲ ಬ್ಯಾಕೋಡ ಹಾಗೂ ಡಿವೈಎಸ್ಪಿ ಡಿ.ಎಸ್.ಪವಾರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ವೀರಣ್ಣ ಹಳ್ಳಿ ನೇತೃತ್ವದಲ್ಲಿ ಪಿಎಸೈ ಯು.ಆರ್.ಪರವಾರ, ಎ ಎಸೈ ಮಹಾವೀರ ಕಾಂಬಳೆ, ಪೊಲೀಸ್ ಸಿಬ್ಬಂದಿಗಳಾದ ಇಸ್ಮಾಯಿಲ್ ಕೋನನಕೇರಿ, ಸಂತೋಷ ರಾಥೋಡ, ಚಿದಾನಂದ ಸಣ್ಣ ಗೌಡರ, ಮಂಜುನಾಥ ಶೆಟ್ಟಿ, ನಾಗರಾಜ ಗೌಡ, ಮಂಜುನಾಥ ಪಟಗಾರ, ಪ್ರವೀಣ ಕಲಿಯವರ, ಸಂತೋಷ ಚಿಣ್ಣನವರ ತಂಡ ದಾಳಿ ಮಾಡಲಾಗಿತ್ತು.
ಕಳೆದ ಕೆಲ ತಿಂಗಳುಗಳಿಂದ ಕಳ್ಳತನ ಕೃತ್ಯದಿಂದ ರೋಸಿ ಹೋಗಿದ್ದ ನಗರದ ಜನತೆ ಇದೀಗ ಕಳ್ಳರ ಬಂಧನ ಸುದ್ದಿ ತಕ್ಕಮಟ್ಟಿಗೆ ಚೇತರಿಕೆಯನ್ನು ನೀಓಡಿದೆ. ಕಳ್ಳರನ್ನು ಹಿಡಿಯುವಲ್ಲಿ ನಿರಂತರ ಶ್ರಮವಹಿಸಿದ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೆಗೆ ಪಾತ್ರವಾಗಿದ್ದು, ಎಸ್.ಪಿ.ವಿನಾಯಕ ಪಾಟೀಲ ಕಳ್ಳರನ್ನು ಹಿಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ.

RELATED ARTICLES  ಕ್ರೀಡೆ ಜೀವನದಲ್ಲಿ ಅತ್ಯಂತ ಪ್ರಮುಖ: ಮಂಕಾಳ ವೈದ್ಯ.