ಅಂಕೋಲಾ : “ವಿದ್ಯಾರ್ಥಿ ಬದುಕಿನಲ್ಲಿರುವಾಗಲೇ ನಿಮ್ಮಲ್ಲಿನ ಕೌಶಲ್ಯ ವೃದ್ಧಿಸಿಕೊಳ್ಳಿ. ಜಗತ್ತಿನಲ್ಲಿ ಇಂದು ಕೌಶಲ್ಯ ಅಭಿವೃದ್ಧಿಗೆ ಪ್ರಾಧಾನ್ಯತೆ ಇದ್ದು, ಇಂದಿನ ಯುವ ಸಮುದಾಯದ ಮುಂದೆ ತಾವೇನು ಆಗಬೇಕು? ಎಂಬ ಕಲ್ಪನೆ ಇಲ್ಲ ನಿಮ್ಮಲ್ಲಿನ, ನಿಮ್ಮ ಸುತ್ತಮುತ್ತಲಿರುವ ಕೌಶಲ್ಯದ ಮೂಲಕ ಸ್ವಾವಲಂಬಿ ಬದುಕು ಸಾಧ್ಯ. ವಿಶ್ವದಲ್ಲೇ ಭಾರತ ಮಾನವ ಸಂಪನ್ಮೂಲದ ಮೂಲಕ ಜಗತ್ತಿನ ದೋಡ್ಡ ದೇಶವಾಗಿದ್ದರೂ ನೀರಿಕ್ಷಿತ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಬಳಕೆಯಾಗದಿರುವುದು ವಿಶಾದನೀಯ” ಎಂದರು.
ನಗರದ ಪಿ.ಎಮ್ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಕೆನರಾ ವೇಲಫೇರ್ ಟ್ರಸ್ಟಿನ ಕಾರ್ಯದರ್ಶಿ ಕೆ.ವಿಶೆಟ್ಟಿ ವಹಿಸಿ ಮಾತನಾಡುತ್ತಾ “ಟ್ರಸ್ಟು ನೀಡುವ ಶೈಕ್ಷಣಿಕ,ಆರೋಗ್ಯ, ಸಾಮಾಜಿಕ ಸೇವಾ ಕೌಶಲ್ಯಗಳನ್ನು ಬಳಸಿಕೊಳ್ಳಬೇಕು. ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲಿಯೇ ತಮ್ಮ ಜೀವನದ ಗುರಿಯ ಸ್ಪಷ್ಟ ಚಿತ್ರಣ ಹೊಂದಿರಬೇಕು ಎಂದರು.
ಆರಂಭದಲ್ಲಿ ಲಕ್ಷ್ಮೀ ನಾಯ್ಕ ವಿದ್ಯಾರ್ಥಿ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಪ್ರಭಾರಿ ಪ್ರಾಚಾರ್ಯ ಪಾಲ್ಗುಣ ಗೌಡ ಸರ್ವರನ್ನು ಸ್ವಾಗತಿಸಿದರು. ಯನಿಯನ್ ಉಪಾಧ್ಯಕ್ಷ ಉಲ್ಲಾಸ ಹುದ್ದಾರ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ ಯ.ಕೆ ಜಿಮಖಾನಾ ವರದಿ ವಾಚಿಸಿದರು. ಹಿರಿಯ ಉಪನ್ಯಾಸಕರಾದ ರಮಾನಂದ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ರಮೇಶ ಗೌಡ ಬಹುಮಾನದ ಯಾದಿ ವಾಚಿಸಿದರು. ಉಪನ್ಯಾಸಕ ಅರವಿಂದ ಆಗೇರ ಉಪಕಾಸ ಸ್ವರಿಸಿದರು. ವಿದ್ಯಾರ್ಥಿ ಪ್ರತಿನಿಧಿ ಲಕ್ಷ್ಮೀ ನಾಯ್ಕ ಹಾಗೂ ಸಂಜಯ ನಾಯ್ಕ ವೇದಿಕೆಯಲ್ಲಿದ್ದರು. ಕಛೇರಿ ಅಧೀಕ್ಷಕ ವಿನಾಯಕ ನಾಯ್ಕ, ಭೋದಕೇತರ ಸಿಬ್ಬಂದಿ ಗಣಪತಿ ಗೌಡ, ಜನಾರ್ಧನ ನಾಯ್ಕ ಸಹಕರಿಸಿದರು.
ದೇಣಿಗೆ
1) ಪ್ರಶಾಂತ ನಾಯಕ : 2019ನೇ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದಾಗಿ ತಿಳಿಸಿದರು.
2) ಮುಂಬೈಯ ಭೂಮಿಕಾ ಎನಲೈಸಸ್ ಕಂಪನಿ ಮಾಲಿಕರಾದ ಆನಂದ ನಾಯಕರ ಕುಟುಂಬ ಕಾಲೇಜಿಗೆ ಕಲರ ಪ್ರಿಂಟರ್ ಮತ್ತು ಕಂಪ್ಯೂಟರ್ ನೀಡಿದ್ದು ಅರ್ಹ ಬಡ ಪ್ರತಿಭಾವಂತ 10ವಿದ್ಯಾರ್ಥಿ ದತ್ತು ಪಡೆಯುವುದು ತಿಳಿಸಿದೆ..
3) ಶ್ರೀಮತಿ ಭಾಗೀರಥಿ ಅವರ ಪತಿ ಶ್ರೀ ವಸಂತ ಹೆಗಡೆಕಟ್ಟೆ 10,000/- ರೂ ದೇಣಿಗೆ ನೀಡಿದ್ದು, ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಅರ್ಹ ವಿದ್ಯಾರ್ಥಿಗಳಿಗೆ ನೀಡುವುದಾಗಿ ತಿಳಿಸಿದೆ.