ಹೊನ್ನಾವರ: ಹಿರಿಯರು ತಮ್ಮ ಸಂಸ್ಕೃತಿಗಳ ಹಾಗೂ ಸಂಪ್ರದಾಯದ ಅಂಶಗಳನ್ನು ಮಗುವಿನಲ್ಲಿ ತುಂಬಬೇಕು ಅದೇ ರೀತಿ ಶಿಲ್ಷಕ ಕೇವಲ ಶಿಕ್ಷಕನಾಗಿರದೆ ಗುರುವಾದಾಗ ಮಾತ್ರ ಗುರುವಿಗೆ ದಿವ್ಯತೆ ಹಾಗೂ ಮಗುವಿನ ಸಂಸ್ಕಾರ ಪ್ರಾಪ್ತವಾಗುತ್ತದೆ ಎಂದು ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ನುಡಿದರು ಅವರು ತಾಲೂಕಿನ ವಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಆತಿಥ್ಯವಹಿಸಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಶಾಸಕರಾದ ದಿನಕರ ಶೆಟ್ಟಿಯವರು ಉದ್ಘಾಟಿಸಿದರು. ಕಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಊರ್ಮಿಳಾ ಶೇಟ್ ಅಧ್ಯಕ್ಷತೆ ವಹಿಸಿದ್ದರು.ಕಡ್ಲೆ ಗ್ರಾ.ಪಂ ಉಪಾಧ್ಯಕ್ಷರಾದ ಗಜಾನನ ಮಡಿವಾಳ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಪ್ರಮುಖರಾದ ಶ್ರೀಮತಿ ಸಾಧನಾ ಬರ್ಗಿ,ಎನ್ ಎಸ್ ನಾಯ್ಕ, ಗೋವಿಂದ ಮುಕ್ರಿ, ಕನ್ನೆ ಮುಕ್ರಿ, ರೂಪಾ ಪಟಗಾರ, ಗಜಾನನ ಮಡಿವಾಳ ಇನ್ನಿತರರು ಹಾಜರಿದ್ದರು.
ವೇದಿಕೆಯಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಪೂರ್ವ ಶಿಕ್ಷಕರನ್ನು ಹಾಗೂ ಶಾಲೆಗಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ಶಾಲೆಯಲ್ಲಿಸಾಧನೆ ಮಾಡಿದವರು ಮತ್ತು ಪೂರ್ವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.