ಹೊನ್ನಾವರ : ಇಲ್ಲಿಯ ಹವ್ಯಕ ವಿಕಾಸ ವೇದಿಕೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹವ್ಯಕ ಹಬ್ಬ ಕರ್ಕಿ ನಾಕಾದ ಹವ್ಯಕ ಸಭಾಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಬೆಳಗ್ಗೆ 9.30ಕ್ಕೆ ಪ್ರಾರಂಭವಾದ ಕಾರ್ಯಕ್ರಮವನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಉದ್ಘಾಟಿಸುವರು.
ಕನ್ನಡ ಪ್ರಭಾದ ಸಂಪಾದಕರಾದ ರವಿ ಹೆಗಡೆ ಅಧ್ಯಕ್ಷ ತೆ ವಹಿಸುವರು. ಅತಿಥಿಗಳಾಗಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ, ಶ್ರೀ ಕರಿಕಾನ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಸುಬ್ರಹ್ಮಣ್ಯ ಭಟ್ಟ, ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಡಾ.ಜಿ.ಜಿ.ಸಭಾಹಿತ, ಉಪನ್ಯಾಸಕಿ ಮಾನಸಾ ಹೆಗಡೆ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ 73 ಜನ ವಿವಿಧ ಕ್ಷೇತ್ರಗಳ ಹವ್ಯಕ ಸಾಧಕರಿಗೆ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ಹವ್ಯಕ ವಿಕಾಸ ವೇದಿಕೆ ಕಳೆದ ಆರೇಳು ವರ್ಷಗಳಿಂದ ಹಲವು ಕಾರ್ಯಗಳನ್ನು ಆಯೋಜಿಸುತ್ತಾ ಬಂದಿದೆ. ಹವ್ಯಕ ಹಬ್ಬ ಎಂದರೆ ಎಲ್ಲರೂ ಸೇರಿ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುವುದಾಗಿದೆ ಎಂದು ಹವ್ಯಕ ವಿಕಾಸ ವೇದಿಕೆಯ ಅಧ್ಯಕ್ಷ ಕವಲಕ್ಕಿ ವೆಂಕಟರ್ರಮಣ ಹೆಗಡೆ ತಿಳಿಸಿದರು.
ಗೋಪಾಲಕೃಷ್ಣ ಹೆಗಡೆ ಕಲಭಾಗ ಮಾತನಾಡಿ, ಹವ್ಯಕ ವಿಕಾಸ ವೇದಿಕೆಯ ಏಳನೇ ವರ್ಷದ ವಾರ್ಷಿಕೋತ್ಸವವನ್ನು ಹವ್ಯಕ ಹಬ್ಬವನ್ನಾಗಿ ವಿಶೇಷವಾಗಿ ಆಚರಿಸಲಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 73 ಜನ ಹವ್ಯಕ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತಿದೆ. ಯಕ್ಷ ಗಾನ ಹವ್ಯಕ ಭಾಷೆಯಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಮಕ್ಕಳಿಗಾಗಿ ಸಂಗೀತ ಖುರ್ಚಿ ಆಟ, ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಈ ಸಂದರ್ಭದಲ್ಲಿ ಜಿ.ಕೆ.ಭಟ್ಟ, ಚಿಟ್ಟಾಣಿ ವಿ.ಜಿ.ಹೆಗಡೆ, ಮಾಗೋಡ ಟಿ.ಜಿ.ಹೆಗಡೆ, ಕೃಷ್ಣಮೂರ್ತಿ ಭಟ್ಟ ಶಿವಾನಿ, ಎಂ.ಎಸ್.ಹೆಗಡೆ ಕಣ್ಣಿ ಇನ್ನಿತರರು ಉಪಸ್ಥಿತರಿದ್ದರು.