ಹೊನ್ನಾವರ: ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳಿಗೆ ಬ್ಯ್ಲಾಕ್‌ ಮೇಲ್ ಮಾಡಿದ ಆರೋಪದಲ್ಲಿ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮತ್ತು ಅವರ ಪತಿ ದಿವಾಕರ ಶಾಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

2014ರಲ್ಲಿ ಕೆಕ್ಕಾರು ಶಾಖಾಮಮಠದಲ್ಲಿ ನಡೆದ ಚಾತುರ್ಮಾಸ್ಯದ ವೇಳೆ ದಿವಾಕರ ಶಾಸ್ತ್ರಿ, ಪ್ರೇಮಲತಾ ಶಾಸ್ತ್ರಿ ಅವರು ಬೆಂಗಳೂರಿನ ಬನಶಂಕರಿ ಪ್ರದೇಶದಿಂದ ಮಠದ ಭದ್ರತಾ ವಿಭಾಗದ ಕಾರ್ಯದರ್ಶಿ ಬಿ.ಆರ್.ಚಂದ್ರಶೇಖರ್ ಅವರಿಗೆ ಕರೆ ಮಾಡಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಕಾಯಿನ್ ಬೂತ್‌ನಿಂದ ಕರೆ ಮಾಡಿದ್ದ ಆರೋಪಿಗಳು ಹಣ ನೀಡದಿದ್ದರೆ ಸ್ವಾಮೀಜಿಗಳ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸುತ್ತೇವೆ ಎಂದು ಬ್ಯ್ಲಾಕ್‌ ಮೇಲ್ ಮಾಡಿದ್ದರು. ಬಿ.ಆರ್.ಚಂದ್ರಶೇಖರ್ ಈ ಕುರಿತು ಹೊನ್ನಾವರವ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತೇ? 28/04/2019 ರ ದಿನ ಭವಿಷ್ಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಾಕರ ಶಾಸ್ತ್ರಿ ಮತ್ತು ಪ್ರೇಮಲತಾ ಅವರ ಬಂಧನವಾಗಿತ್ತು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನು ಹೊನ್ನಾವರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಬಿ.ಆರ್.ಚಂದ್ರಶೇಖರ್ ಪ್ರಶ್ನಿಸಿದ್ದರು.

ದಿವಾಕರ ಶಾಸ್ತ್ರಿ ಮತ್ತು ಪ್ರೇಮಲತಾ ಅವರು ಹೊನ್ನಾವರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಆ ಅರ್ಜಿ ವಜಾಗೊಂಡು ಶ್ರೀಗಳಿಗೆ ಭಾರೀ ಮುನ್ನಡೆ ಸಿಕ್ಕಿದೆ. ಶ್ರೀಗಳ ಮೇಲೆ ನಡೆದಿದ್ದ ಷಡ್ಯಂತ್ರದ ಬಗ್ಗೆ ಈ ಪ್ರಕರ್ಣ ಮಹತ್ವದ್ದು ಎನಿಸಿದೆ.

RELATED ARTICLES  ಸಿದ್ಧರಾಮಯ್ಯ ವಿರುದ್ದ ಚಾರ್ಜ್‌ಶೀಟ್‌ ಸಲ್ಲಿಕೆಯಲ್ಲೂ ಯಡವಟ್ಟು ಮಾಡಿಕೊಂಡ BJP !

   ಧಾರವಾಡದ ಸಂಚಾರಿ ಪೀಠದಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿತ್ತು. ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಏಕಸದಸ್ಯ ಪೀಠ ವಿಡಿಯೋ ಕಾನ್ಪರೆನ್ಸ್ ಮೂಲಕ ಬೆಂಗಳೂರಿನಿಂದ ಆದೇಶವನ್ನು ಪ್ರಕಟಿಸಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರೇಮಲತಾ ಶಾಸ್ತ್ರಿ, ದಿವಾಕರ ಶಾಸ್ತ್ರಿ ಮತ್ತು ನಾರಾಯಣ ಶಾಸ್ತ್ರಿ ವಿರುದ್ಧದ ವಿಚಾರಣೆ ಮುಂದುವರೆಯಲಿ ಎಂದು ಹೇಳಿರುವ ಕೋರ್ಟ್, ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.