ಮೇಷ:- ಕೆಲವು ಸಮಸ್ಯೆಗಳು ಎದುರಾಗಲಿವೆಯಾದರೂ ಅವನ್ನು ಎದುರಿಸುವ ಶಕ್ತಿಯನ್ನು ತೋರುವಿರಿ. ಜನರೊಡನೆ ಬೆರೆಯುವಾಗ ತಾಳ್ಮೆರೂಢಿಸಿಕೊಳ್ಳಿ. ಅವರು ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನಿಮಗೆ ಕೋಪ ಬರಿಸುವ ಸಾಧ್ಯತೆ ಇದೆ.

ವೃಷಭ:- ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಣಕ್ಕೆ ಒಳಪಡಿಸುವುದು ಒಳ್ಳೆಯದು. ದುಂದುವೆಚ್ಚಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ.


ಮಿಥುನ:- ಬಂಧುಗಳು ಅಥವಾ ಒಡಹುಟ್ಟಿದ ಸಹೋದರ, ಸಹೋದರಿಯರೇ ಆಸ್ತಿ ಪಾಲು ವಿಷಯದಲ್ಲಿ ತಕರಾರು ಮಾಡುವ ಸಾಧ್ಯತೆ ಇದೆ. ಗುರು, ಹಿರಿಯರ ಮಧ್ಯಸ್ಥಿಕೆಯಿಂದ ಒಳಿತಾಗುವುದು. ನಿಮಗೆ ನ್ಯಾಯಯುತವಾಗಿ ಬರಬೇಕಾದ ಪಾಲು ದೊರೆಯುವುದು.

ಕಟಕ:- ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಹೆಂಡ ಕುಡಿದರು ಎಂದೇ ಪಿತೂರಿ ಎಬ್ಬಿಸುವರು. ಹಾಗಾಗಿ ಯಾವುದೇ ಕಾರ್ಯ ಮಾಡುವ ಮೊದಲು ಸ್ಥಾನಬಲ ಮುಖ್ಯ. ಯಾವುದೇ ಸೂಕ್ತ ನಿರ್ಧಾರ ತಳೆಯುವ ಮುನ್ನ ಎರಡು ಬಾರಿ ಯೋಚಿಸಿ.

RELATED ARTICLES  ಮೋದಿ ಆಗಮನ ಬೆಂಗಳೂರು ಹೇಗೆ ಬದಲಾಗಿದೆ ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ.

ಸಿಂಹ:- ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಜಗ್ಗಾಡದೆ ಅಥವಾ ಕಾದಾಡದೆ ಸುಮ್ಮನೆ ಮಾತುಕತೆ ನಡೆಸಿ. ಇದರಿಂದ ಒಳಿತಾಗುವುದು. ಇತರರಿಗೆ ಸಹಾಯ ಮಾಡಲು ಮನಸ್ಸು ಇಲ್ಲದಿದ್ದರೆ ಸಹಾಯ ಮಾಡುವವರಿಗೂ ದಾರಿ ತಪ್ಪಿಸಬೇಡಿ.

ಕನ್ಯಾ:- ಅಡಕೆ ಕದ್ದ ಮಾನ ಆನೆ ಕೊಟ್ಟರೂ ಸರಿಹೋಗದು ಎಂಬ ಗಾದೆ ಮಾತು ನೆನಪಾಗುವುದು. ಆದರೂ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ಎಲ್ಲವೂ ಸುಗಮವಾಗುವವು.

ತುಲಾ:- ವಿದೇಶದಿಂದ ಬರುವ ಸ್ನೇಹಿತ ಅಥವಾ ಬಂಧುಗಳ ಆಗಮನದಿಂದ ಅನಿರೀಕ್ಷಿತವಾಗಿ ಬಹುದಿನಗಳಿಂದ ಕಾಡುತ್ತಿದ್ದ ವ್ಯಾಜ್ಯ ಸಮಾಪ್ತಿಯಾಗುವುದು. ಕೆಲಸ ಕಾರ್ಯಗಳಲ್ಲಿನ ನಿಷ್ಠೆ ನಿಮಗೆ ಗೌರವ ತಂದುಕೊಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ:- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತು ತಿಳಿದೂ ದೂರದ ಬಂಧುಗಳು ಸಹಾಯ ಮಾಡುವರೆಂಬ ಭ್ರಮೆಯಲ್ಲಿರಬೇಡಿ. ಸದ್ಯದ ಗ್ರಹಸ್ಥಿತಿಗಳು ಪೂರಕವಾಗಿಲ್ಲದ ಕಾರಣ ಅರಿತು ಸುಮ್ಮನಿರುವುದು ಒಳ್ಳೆಯದು.

RELATED ARTICLES  ಭಟ್ಕಳದಲ್ಲಿ ಮಳೆಯ ಅವಾಂತರ : ತುಂಬಿತು ಜಲರಾಶಿ.(ವಿಡಿಯೋ)

ಧನುಸ್ಸು:- ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.

ಮಕರ:- ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವಸರದ ತೀರ್ಮಾನ ಅಪಹಾಸ್ಯಕ್ಕೆ ಗುರಿ ಆಗುವ ಸಂದರ್ಭ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಅಧಿಕ ಖರ್ಚಿನ ದಾರಿ ಎದುರಾಗುವುದು.

ಕುಂಭ:- ವಿಷ್ಣು ಸಹಸ್ರನಾಮ ಪಾರಾಯಣದಿಂದ ಇಚ್ಛಿತ ಕಾರ್ಯಗಳು ಬೇಗನೆ ಕೈಗೂಡುವವು. ನೀವು ನಿಮ್ಮ ವಿದ್ಯಾಭ್ಯಾಸದಲ್ಲಿ ಚಾಕಚಕ್ಯತೆ ತೋರಿ ಅಂತಿಮ ಗುರಿ ತಲುಪಲು ಈ ಸ್ತೋತ್ರ ಸಹಕಾರಿಯಾಗುವುದು.

ಮೀನ:- ಕೆಲವು ಪ್ರಮುಖ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಅಂತೆಯೇ ಬಹು ಮುಖ್ಯವಾದ ಕಡತವೊಂದನ್ನು ಹುಡುಕಿಕೊಡಲೇ ಬೇಕೆಂದು ನಿಮ್ಮ ಮೇಲಧಿಕಾರಿಗಳು ಆದೇಶ ಹೊರಡಿಸುವರು. ದೇವರನ್ನು ಸ್ಮರಿಸಿ ಕಾರ್ಯ ಪ್ರವೃತ್ತರಾಗಿ.