ಯಲ್ಲಾಪುರ: ತಾಲೂಕಿನ ಗಡಿ ಭಾಗವಾದ ಕಲ್ಲೇಶ್ವರದಲ್ಲಿ ಸೋಮವಾರ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಹಿಳೆಯರ ಮತ್ತು ಮಕ್ಕಳ ಪ್ರತ್ಯೇಕ ಗ್ರಾಮ ಸಭೆ ನಡೆದವು.
ಮಕ್ಕಳ ಗ್ರಾಮ ಸಭೆ:
ಕಲ್ಲೇಶ್ವರದ ಸರಕಾರಿ ಪೌಢಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಕಾನೂನು ಈ ವಿಷಯದ ಕುರಿತು ಸಭೆ ನಡೆಯಿತು. ಶಾಲಾ ವಿದ್ಯಾರ್ಥಿ ಪ್ರತಿನಿಧಿ ಭಾರತಿ ಮಹಾಬಲೇಶ್ವರ ಭಟ್ಟ ಅಧ್ಯಕ್ಷತೆ ವಹಿಸಿದ್ದರು.  ಸುಚೇತಾ ಭಟ್ಟ ಮತ್ತು  ನಿತಿನ್ ಭಟ್ಟ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಡೋಂಗ್ರಿ ಗ್ರಾಮ ಪಂಚಾಯತ ಅಧ್ಯಕ್ಷ ಗೋಪಣ್ಣ ವೈದ್ಯ, ಸದಸ್ಯೆ ಲಲಿತಾ ಭಟ್ಟ, ಪ್ರೌಢಶಾಲಾ ಮುಖ್ಯಾಧ್ಯಾಪಿಕೆ ಪ್ರಭಾವತಿ ನಾಯಕ, ವಾಮನ ಆಗೇರ, ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟ್ರಮಣ ಭಟ್ಟ, ಸಿ.ಆರ್.ಪಿ ಕೆ. ಎಂ.ಗೌಡ , ಗ್ರಾ.ಪಂ ಕಾರ್ಯದರ್ಶಿ ಸುರೇಶ ನಾಯ್ಕ ಮತ್ತು ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಇದ್ದರು.

RELATED ARTICLES  ನಾಮಧಾರಿ ಸಭಾಭವನದ ಶಿಲಾನ್ಯಾಸ ನೆರವೇರಿಸಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು.

ರಂಜಿತಾ ಕೋಟೆಮನೆ ಸ್ವಾಗತಿಸಿದರು, ರಕ್ಷಿತಾ ಕೋಟೇಮನೆ ನಿರೂಪಿಸಿದರು. ಚೈತ್ರಾ ಭಟ್ಟ ವಂದಿಸಿದರು.  ಸಭೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.

ಮಹಿಳಾ ಗ್ರಾಮ ಸಭೆ:
ಕಲ್ಲೇಶ್ವರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಗ್ರಾಮ ಪಂಚಾಯತದ ಪಿಡಿಓ ಗಿರೀಶ ನಾಯಕ ಮಹಿಳಾ ಕಾನೂನು ಮತ್ತು ಮಹಿಳಾ ಗ್ರಾಮ ಸಭೆಯ ಮಹತ್ವವನ್ನು ತಿಳಿಸಿದರು.
ಸಂಜೀವಿನಿ ಯೋಜನೆಯ ಮುಖ್ಯಸ್ಥ ರಾಜಾರಾಮ ವೈದ್ಯ ಯೋಜನೆಯ ಬಗ್ಗೆ ಮತ್ತು ಮಹಿಳೆಯರು ಸರಕಾರದಿಂದ ಪಡೆದುಕೊಳ್ಳಬಹುದಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ ಅಧ್ಯಕ್ಷ ಗೋಪಣ್ಣ ವೈದ್ಯ ಅಧ್ಯಕ್ಷತೆಯನ್ನು ವಹಿಸಿದ್ದರು.  ಗ್ರಾ ಪಂ ಸದಸ್ಯೆಯರಾದ ಲಲಿತ ಭಟ್ಟ, ನಾಗರತ್ನಾ ಭಟ್ಟ , ಗ್ರಾ ಪಂ ಉಪಾಧ್ಯಕ್ಷೆ ಗೌರಿ ಸಿದ್ದಿ, ಸದಸ್ಯರಾದ ಸುರೇಶ ನಾಯ್ಕ ಇವರೊಂದಿಗೆ ಸ್ಥಳೀಯ ಮಹಿಳೆಯರು, ಸ್ವ ಸಹಾಯ ಸಂಘದ ಸದಸ್ಯೆಯರು ಮಹಿಳಾ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES  ಚಂದಾವರದ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವ ಪೂಜೆ ಸಂಪನ್ನ.