ಹೊನ್ನಾವರ: ಹೊನ್ನಾವರ ಪಟ್ಟಣದ ಸಮೀಪದ ಗೇರುಸೊಪ್ಪ ಸರ್ಕಲ್ ಬಳಿ ತುಂಬಿದ ಗ್ಯಾಸ್ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮಂಗಳವಾರ ನಸೂಕಿನಲ್ಲಿ ಉರುಳಿ ಬಿದ್ದಿದೆ.
ಟ್ಯಾಂಕರ್ ಪರಿಶೀಲಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ
ಮಂಗಳೂರಿನಿಂದ ಸೂರತ್ ಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ , ಅಪಘಾತದಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದ್ರಷ್ಟಾವಶಾತಃ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿಲ್ಲ,
ಗ್ಯಾಸ್ ಟ್ಯಾಂಕರ್
ಅಪಘಾತದ ನಂತರ ಕೆಲ ಸಮಯ ಹೆದ್ದಾರಿಯ ಸಂಚಾರವನ್ನು ತಡೆಯಲಾಗಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬಿದ್ದಿರುವ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿದ ನಂತರ ಮತ್ತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕುಮಟಾ ಬರ್ಗಿಯಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ಅಪಘಾತದಿಂದ ಇದುವರೆಗೂ ಈ ಭಾಗದ ಜನತೆ ಚೇತರಿಸಿಕೊಂಡಿಲ್ಲ , ಗೇರುಸೊಪ್ಪ ಕ್ರಾಸ್ ಬಳಿ ಮಂಗಳವಾರ ನಸೂಕಿನಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಸುದ್ದಿ ತಿಳಿಯುತ್ತಲೇ ಸ್ಥಳೀಯ ಜನತೆ ಆತಂಕಕ್ಕೀಡಾದರು. ಕೆಲವು ಜನ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್ ವ್ಯಾಪ್ತಿಯಿಂದ ದೂರ ಹೊರಟರೆನ್ನಲಾಗಿದೆ.
ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಬಿದ್ದಿರುವ ಟ್ಯಾಂಕರ್ ಮೇಲೆ ನಿಗಾವಹಿಸಿದ್ದಾರೆ. ಅಗ್ನಿ ಶಾಮಕ ದಳವನ್ನು ಸ್ಥಳದಲ್ಲಿಯೇ ನಿಯುಕ್ತಿಗೊಳಿಸಲಾಗಿದೆ