ಹೊನ್ನಾವರ :ಪ್ರಚೋದನಕಾರಿ ಹೇಳಿಕೆಗಳ ಮೂಲಕವೇ ಗುರುತಿಸಿಕೊಳ್ಳುತ್ತಿದ್ದ ಅನಂತ್ ಕುಮಾರ್ ಹೆಗಡೆಯವರಿಗೆ ಬಂಧನದ ವಾರೆಂಟ್ ಜಾರಿಯಾಗಿತ್ತು .
2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚೋಧನಾಕಾರಿ ಭಾಷಣ ಹಿನ್ನಲೆಯಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ದ ಅಂದಿನ ಚುನಾವಣಾ ಅಧಿಕಾರಿಯಾಗಿದ್ದ ಭಟ್ಕಳ ಉಪವಿಭಾಗಾಧಿಕಾರಿ ದೂರನ್ನು ದಾಖಲಿಸಿದ್ದರು. ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಿಂದ ಅನಂತ ಕುಮಾರ್ ಹೆಗಡೆಯವರಿಗೆ ಬಂಧನದ ವಾರೆಂಟ್ ರವಾನೆಯಾಗಿದೆ ಎನ್ನಲಾಗಿದೆ.
ಆದರೆ ಈ ಸಂಬಂಧ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಕಾರವಾರದ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಇಂದು ಅವರು
ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ನಿರೀಕ್ಷಣಾ ಜಾಮೀನು ಹಾಜರುಪಡಿಸಿದರು.
ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದು
ಎಂದೋ ಮಾಡಿದ ಭಾಷಣಕ್ಕೆ ಇನ್ಯಾವಾಗಲೋ ಕೇಸ್ ಹಾಕುವ ಸರ್ಕಾರ ಪೂರ್ವಾಗ್ರಹ ಪೀಡಿತ.ಇಂದಿನ ಸರ್ಕಾರ ಮತ್ತೊಮ್ಮೆ ನನ್ನ ಗುರಿಯಾಗಿಸಿಕೊಂಡಿದೆ.ನಮ್ಮ ಚುನಾವಣೆಯನ್ನು ಬಹುಶಃ ಕಾಂಗ್ರೆಸ್ ಸರ್ಕಾರವೇ ಮಾಡಿ ಮುಗಿಸುವ ಸ್ಥಿತಿ ಅವರೇ ತಂದುಕೊಟ್ಟಿದ್ದಾರೆ . ಭಾಷಣವನ್ನು ಮುಂದಿಟ್ಟು ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ,ಕೇಸ್ಗಳಿಗೆ ಸ್ವಾಗತ ಮತ್ತು ಕಾಂಗ್ರೆಸ್ ಗೆ ಧನ್ಯವಾದ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು.