ಕಾರವಾರ: ಪ್ರಿಯಾಂಕಾ ಗಾಂಧಿಯೊಂದಿಗೆ ಕಾಂಗ್ರೆಸ್‌ನ ಮಹಾಭಾರತ ಪೂರ್ಣಗೊಳ್ಳಲಿದೆ. ಕಾಂಗ್ರೆಸ್, ನೆಹರೂ ಕುಟುಂಬದ ಹೊರತಾಗಿ ಯಾರನ್ನೂ ಒಪ್ಪದು. ದೇಶದ ಎಲ್ಲಾ ವ್ಯವಸ್ಥೆಯಲ್ಲಿ ಅರ್ಬನ್ ನಕ್ಸಲ್ಸ್ ತುಂಬಿಕೊಂಡಿದ್ದಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಕಡೆ ಕಾಂಗ್ರೆಸ್ ರಾಷ್ಟ್ರ ದ್ರೊಹಿಗಳನ್ನು ಇಟ್ಟಿದೆ. ಮಾಧ್ಯಮದಲ್ಲೂ ಅರ್ಬನ್ ನಕ್ಸಲ್ಸ್ ಇದ್ದಾರೆ. ಅವರೇ ಎಲ್ಲೂ ಇಲ್ಲದ ನನ್ನನ್ನು ಜನಪ್ರಿಯತೆಗೆ ತಂದವರು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಕಾಂಗ್ರೆಸ್ ಬತ್ತಳಿಕೆಯಲ್ಲಿ ಇರೋ ಕೊನೆಯ ಅಸ್ತ್ರ ಪ್ರಿಯಾಂಕಾ ಗಾಂಧಿ. ಪ್ರಿಯಾಂಕಾ ಗಾಂಧಿಯನ್ನ ರಾಹುಲ್ ಗಾಂಧಿಗಿಂತ ಪ್ರಭಾವಿಯಂತೆ, ಇಂದಿರಾಗಾಂಧಿ ಅವತಾರವಂತೆ ಎಂದು ವರ್ಣಿಸಲಾಗ್ತಿದೆ. ಅವಳ ಬಂಡವಾಳವೂ ಇನ್ನೇನು ಬಯಲಾಗಲಿದೆ ಎಂದು ಅನಂತ ಕುಮಾರ್ ಹೆಗಡೆ ಗುಡುಗಿದ್ದಾರೆ.
ನಾನು ಹೇಳುವ ಹೇಳಿಕೆಗಳಿಗೆ ವಿವಾದಿತ ಹೇಳಿಕೆ ಎಂದು ಪ್ರಚಾರ ನೀಡಿದ್ದಕ್ಕೆ ಎಲ್ಲಾ ಮಾಧ್ಯಮಗಳಿಗೆ ಧನ್ಯವಾದ ಎಂದೂ ಅವರು ಹೇಳಿದರು.