ಹೊನ್ನಾವರ: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ತಾಲೂಕಿನ ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಮೆಟ್ರಿಕ್ ಮೇಳ ಏರ್ಪಡಲಾಯಿತು.
ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿ, ಸೊಪ್ಪು, ಹಣ್ಣು-ಹಂಪಲು, ತಿಂಡಿ-ತಿನಿಸುಗಳು, ಬೇಳೆಕಾಳುಗಳು, ಎಳೆ ನೀರು, ಹಳ್ಳಿ ತಿಂಡಿಗಳು ಸೇರಿದಂತೆ ಹಲವಾರು ಸಾವಯವ ಕೃಷಿ ಮಾರುಕಟ್ಟೆಗಳ ಹೋಲಿಕೆಯಂತೆ ವಿದ್ಯಾರ್ಥಿಗಳು ಸಕತ್ ವ್ಯಾಪಾರ ವಹಿವಾಟು ನಡೆಸಿದರು. ಊರಿನ ಅನೇಕರು, ಪಾಲಕರು, ಮಹಿಳೆಯರು ಸೇರಿ ವಿದ್ಯಾರ್ಥಿಗಳೊಂದಿಗೆ ವ್ಯಾಪಾರ ನಡೆಸುವಲ್ಲಿ ತಲ್ಲೀನರಾದರು. ಅತೀ ಅಪರೂಪದ ತರಕಾರಿಗಳನ್ನು ಉತ್ತಮ ಬೆಲೆಯಲ್ಲಿ ಹೊಂದುವಂತೆ ಮಕ್ಕಳಲ್ಲಿ ವ್ಯವಹಾರದ ಜ್ಞಾನ ಮೂಡಿಸುವುದರೊಂದಿಗೆ ಖರೀದಿಯನ್ನು ಮಾಡಿದರು.
ಮನೆಯಲ್ಲಿ ಪಾಲಕರು ತಯಾರಿಸಿಕೊಟ್ಟ ರುಚಿಕರ ತಿಂಡಿಗಳನ್ನು ಊರಿನ ಅನೇಕರು ಖರೀದಿ ಮಾಡುವುದರೊಂದಿಗೆ ಸಕತ್ ಎಂಜೋಯ್ ಮಾಡಿದರು. ಒಬ್ಬರಿಗಿಂತ ಒಬ್ಬರು ಅತೀ ಹೆಚ್ಚು ವ್ಯಾಪಾರ ಮಾಡುವ ಮೂಲಕ ಜಾಣ್ಮೆ, ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ವ್ಯಾಪಾರ ಮಾಡಿದ ಬಗೆ ಎಲ್ಲರಿಗೂ ಅಚ್ಚುಮೆಚ್ಚು ತಂದಿತು. ಸಂಜೆ ವರೆಗೆ ಸುಮಾರು 6 ಸಾವಿರ ರೂ. ಗೂ ಹೆಚ್ಚು ವ್ಯಾಪಾರ ನಡೆಸಿದರು.
ಮುಖ್ಯಾಧ್ಯಾಪಕ ನಾಗಪ್ಪ ಮುಕ್ರಿ, ಶಿಕ್ಷಕರಾದ ಮಾದೇವಿ ಹೆಗಡೆ, ಜ್ಯೋತಿ ಶೇಟ್, ಯಾಸ್ಮೀನಾ ಬಾನು, ಸವಿತಾ ನಾಯ್ಕ ಸಹಕರಿಸಿದರು. ಎಸ್.ಡಿ.ಎಂ ಅಧ್ಯಕ್ಷರು, ಉಪಾಧ್ಯಕ್ಷರು ಊರಿನ ಪ್ರಮುಖರು ಪಾಲ್ಗೊಂಡಿದ್ದರು.