ಕುಮಟಾ: ನಿನ್ನೆ ಹಳೇಮೀನು ಮಾರುಕಟ್ಟೆಯ ಸುತ್ತಲ ಪ್ರದೇಶಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ಅವರು ಜನವಸತಿ ನಡುವೆ ಸೂಕ್ತವಾದ ರಸ್ತೆ ಕೊರತೆಯ ಸಮಸ್ಯೆಯನ್ನು ಜನರಿಂದ ತಿಳಿದುಕೊಂಡು ಈ ದಿನ ರಸ್ತೆ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
ಕೆಲವೆಡೆ ಜನರೇ ರಸ್ತೆಗೆ ಬೇಕಾದ ಜಾಗ ತೆರವುಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಸೂಚಿಸಿದರು. ಈ ಸಂದರ್ಭದಲ್ಲಿ ಕೆಲವರು ರಸ್ತೆಗೆ ಜಾಗ ಸ್ವತಃ ತಾವೇ ತೆರವುಗೊಳಿಸುವುದಾಗಿ ಒಪ್ಪಿದ್ದರು ,ಆದರೆ ಕೆಲ ತಕರಾರು ಇದ್ದ ಕಾರಣ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಹಿಟಾಚಿಯೊಂದಿಗೆ ಬಂದು ಸಿಬ್ಬಂದಿಗಳ ಮೂಲಕ ಇಕ್ಕಟ್ಟಾದ ರಸ್ತೆಗಳನ್ನು ವಿಸ್ತರಿಸಲು ಆರಂಭಿಸಿದರು. ಈ ಸಂದರ್ಭದಲ್ಲಿ ಅಲ್ಪಮಟ್ಟಿನ ವಿರೋಧ ವ್ಯಕ್ತವಾಗಿತ್ತಾದರೂ ನಂತರ ಸಮಸ್ಯೆಯನ್ನು ಮಾತುಕತೆ ಮೂಲಕವೇ ಪರಿಹಾರ ಮಾಡಲಾಗಿದೆ.
ಪಟ್ಟಣದ ಹಳೆ ಮೀನುಮಾರುಕಟ್ಟೆ ಪ್ರದೇಶದ 51 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಕ್ಕಟ್ಟಾಗಿದ್ದ ರಸ್ತೆಗಳ ವಿಸ್ತರಣಾ ಕಾರ್ಯವನ್ನು ಪುರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗಿದೆ.