ಕುಮಟಾ : ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಗಾರಗಲ್ಲಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಅದ್ದೂರಿಯಾಗಿ ಜರುಗಿತು..
ಕಾರ್ಯಕ್ರಮವನ್ನು ಜಿ ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಉದ್ಘಾಟಿಸಿದರು..
ಶಾಲೆಯ ಹಸ್ತ ಪತ್ರಿಕೆಯನ್ನು ಉದ್ಯಮಿ ಹಾಗೂ ಶಿಕ್ಷಣ ಪ್ರೇಮಿ ಸುಬ್ರಾಯ ವಾಳ್ಕೆ ಬಿಡುಗಡೆಗೊಳಿಸಿದರು.. ಹಸ್ತ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಸುಬ್ರಾಯ ವಾಳ್ಕೆ ದ್ವಿಭಾಷೆ ಶಾಲೆಗಳು ಸರ್ಕಾರಿ ಶಾಲೆಗಳ ಉಳಿವಿಗೆ ಅತ್ಯವಶ್ಯಕ.. ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಂದ ಬಡ ಮಕ್ಕಳ ಕನಸು ಸಾಕಾರಗೊಳ್ಳುತ್ತದೆ.. ಅವರೂ ಕೂಡ ಉತ್ತಮ ಇಂಗ್ಲಿಷ್ ಕಲಿತು ಪ್ರಬುದ್ಧರಾಗಲು ಸಾಧ್ಯ.. ಇಂದಿನ ದಿನಗಳಲ್ಲಿ ನಮ್ಮ ಭಾಷೆ ಎಷ್ಟು ಅಗತ್ಯವೋ ಅಷ್ಟೇ ಇಂಗ್ಲಿಷ್ ಕೂಡ ಅವಶ್ಯಕತೆ ಇದೆ.. ಚಿಕ್ಕಂದಿನಿಂದಲೇ ಮಕ್ಕಳಿಗೆ ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್ ಬೋಧನೆ ಮುಂದೆ ಅವರಿಗೆ ಹೆಚ್ಚಿನ ವಿದ್ಯಾಭ್ಯಾಸ ಕ್ಕೆ ತುಂಬಾ ಅನುಕೂಲ ಆಗುತ್ತದೆ ಎಂದರು..
ನಂತರ ಸುಬ್ರಾಯ ವಾಳ್ಕೆ ಯವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು..
ವೇದಿಕೆಯಲ್ಲಿ ಪುರಸಭಾ ಸದಸ್ಯ ಎಮ್ ಟಿ ನಾಯ್ಕ, ಚೇತನ್ ಶೇಟ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಪಾಲಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಉಪಸ್ಥಿತರಿದ್ದರು..