ಹೊನ್ನಾವರ: ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ನಡೆಸುವ ರಾಮಾಯಣ ಪರೀಕ್ಷೆಯಲ್ಲಿ ಭಾಗವಹಿಸಿದ ಸ್ಥಳೀಯ ನ್ಯೂ ಇಂಗ್ಲಿಷ್ ಶಾಲೆ 56 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಸಾಧನೆಗೈದಿರುತ್ತಾರೆ.
ಶಿಕ್ಷಕ ಹರ್ಷ ಭಟ್ಟರ ಮಾರ್ಗದರ್ಶನದಲ್ಲಿ ವರ್ಷಾ ಭಟ್ ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿರುತ್ತಾಳೆ. ವಿದ್ಯಾರ್ಥಿನಿಯರಾದ ಇನಿ ನಾಯ್ಕ, ಸ್ವಾತಿ ಹೆಗಡೆ, ನಿಶಾ ಸಾಳೆಹಿತ್ತಲ್, ಭವ್ಯಾ ನಾಯ್ಕ, ರಕ್ಷಿತಾ ಖಾರ್ವಿ, ಅರ್ಪಿತಾ ನಾಯ್ಕ 90ಕ್ಕೂ ಅಧಿಕ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆಗೈದಿರುತ್ತಾರೆ.