ಹೊನ್ನಾವರ : ರೋಟರಿ ಕ್ಲಬ್ ಹಾಗೂ ಧರ್ಮಸ್ಥಳ ಸ್ವ ಸಹಾಯ ಸಂಘದ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಸಾವಯವ ಕೃಷಿ ಮೇಳ ಹೊನ್ನಾವರದ ಪ್ರಭಾತನಗರದ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಎರಡು ದಿನಗಳ ಕಾಲ ನಡೆದ ಸಾವಯವ ಕೃಷಿ ಮೇಳದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.. ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ಸುಬ್ರಾಯ ವಾಳ್ಕೆ ನಮ್ಮ ಈ ಭಾಗದಲ್ಲಿ ಹೆಚ್ಚಿನ ಜನ ಕೃಷಿ ಯನ್ನೇ ಅವಲಂಬಿಸಿದ್ದಾರೆ ಆದರೆ ಇಂದಿನ ದಿನಗಳಲ್ಲಿ ಕೃಷಿಯನ್ನು ಮಾಡುವವರ ಸಂಖ್ಯೆ ಇಳಿಮುಖ ವಾಗುತ್ತಿರುವುದಂತೂ ಸುಳ್ಳಲ್ಲ.. ಹೆಚ್ಚಿನ ಯುವ ಜನಾಂಗ ಉದ್ಯೋಗ ದ ನಿಮಿತ್ತ ಪಟ್ಟಣ ಸೇರಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ.. ಕೂಲಿ ಸಮಸ್ಯೆಗಳು ಸಹ ಮೂಲ ಕಾರಣ.
ಈ ಸಾವಯವ ಕೃಷಿ ಮೇಳ ಇದು ನಿಜಕ್ಕೂ ಉತ್ತಮ ಕಾರ್ಯಕ್ರಮ ಇದು ರೈತರಿಗೆ ಸಾವಯವ ಕೃಷಿ ಬಗ್ಗೆ ಹೆಚ್ಚು ಸಹಕಾರಿ.. ಕೃಷಿ ಯ ಬಗ್ಗೆ ದೂರದೃಷ್ಟಿಯ ಯೋಜನೆಗಳ ಅವಶ್ಯಕತೆ ಇದೆ. ಸರ್ಕಾರ ದಿಂದ ಕೃಷಿ ಗೆ ವಿಶೇಷ ಉತ್ತೇಜನ ನೀಡಬೇಕಿದೆ.. ಈಗಾಗಲೇ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ರೈತರ ಬಗ್ಗೆ ಹೆಚ್ಚಿನ ಕಾಳಜಿ ವ್ಯಕ್ತಪಡಿಸಿರುವುದು ಉತ್ತಮ ಬೆಳವಣಿಗೆ ಎಂದರು..
ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾವಯವ ಕೃಷಿ ಮೇಳದ ಅಂಗವಾಗಿ ವಿಶೇಷ ಮಳಿಗೆಗಳನ್ನು ತೆರೆಯಲಾಗಿತ್ತು.. ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಮೇಳದ ಪ್ರಯೋಜನ ಪಡೆದುಕೊಂಡರು.
ವೇದಿಕೆಯಲ್ಲಿ ಮುರಳೀಧರ ಪ್ರಭು, ಜಿ ಪಂ ಸದಸ್ಯೆ ಶ್ರೀಕಲಾ ಶಾಸ್ತ್ರೀ ಹಾಗೂ ಇತರು ಉಪಸ್ಥಿತರಿದ್ದರು..