ಹೊನ್ನಾವರ: ದಿನಾಂಕ 05-02-2019 ರಂದು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕವಲಕ್ಕಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕರಿಕಾನ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಭಟ್ ಇವರು ವಹಿಸಿದ್ದರು. ಶ್ರೀ ಎಚ್.ಎನ್ ಪೈ, ನಿವೃತ್ತ ಶಿಕ್ಷಕರು ಇವರು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಶ್ರೀ ವಿ.ಜಿ ಹೆಗಡೆ, ನಿವೃತ್ತ ಪ್ರಾಂಶುಪಾಲರು ಇವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ ಅಬ್ಳಿ ಮತ್ತು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ. ಟಿ.ಜಿ.ಹೆಗಡೆ, ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಧ್ಯಾಪಕಿಯಾದ ಶ್ರೀಮತಿ. ವೈಲೆಟ್ ಫರ್ನಾಂಡಿಸ್‍ರವರು ಉಪಸ್ಥಿತರಿದ್ದರು.
ಉದ್ಘಾಟಕರಾದ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಭಟ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಪಡೆದಿದ್ದಾರೆ, ಶಾಲೆಯು ಉನ್ನತ ಮಟ್ಟದಲ್ಲಿ ಹೆಸರನ್ನು ಗಳಿಸುವಂತಾಗಲಿ ಮತ್ತು ಅಧ್ಯಕ್ಷರಾದ ಉಮೇಶ ಹೆಗಡೆಯವರ ಶ್ರಮವನ್ನು ಶ್ಲಾಘಿಸಿದರು. ಶಾಲೆಯು 14 ವರ್ಷಗಳನ್ನ ಪೂರೈಸಿ 15 ವರ್ಷಕ್ಕೆ ಕಾಲಿಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಥಿತಿಗಳಾದ ಎಚ್.ಎನ್ ಪೈ ಇವರು ಶಿಕ್ಷಕರನ್ನು ಮತ್ತು ಪಾಲಕರನ್ನು ಉದ್ದೇಶಿಸಿ ಸ್ಪೂರ್ತಿದಾಯಕ ಮಾತನಾಡಿದರು. ಮತ್ತು ಮಕ್ಕಳು ಹೇಗೆ ಅಧ್ಯಯನದಲ್ಲಿ ತೊಡಗಬೇಕೆಂದು ಸೂಕ್ಷ್ಮವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದ ಗೌರವ ಅಥಿತಿಗಳಾದ ಶ್ರೀ ವಿ.ಜಿ ಹೆಗಡೆ ಇವರು ಮಾತನಾಡಿ ಶಾಲೆಯು ದೇಶದಾದ್ಯಂತ ಹೆಸರು ಮಾಡುವಂತಾಗಲಿ ಎಂದು ಹಾರೈಸಿದರು.
.ಈ ಸಂದರ್ಭದಲ್ಲಿ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೇ ಸಿದ್ಧಪಡಿಸಿದ “ಜ್ಞಾನ ಶರಾವತಿ” ಎಂಬ ಹಸ್ತ ಪ್ರತಿಯನ್ನ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮವನ್ನು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ ಇವರು ಸ್ವಾಗತಿಸಿದರು, ಸಹ ಶಿಕ್ಷಕಿಯಾದ ಶ್ರೀಮತಿ ರಮ್ಯಾ ಹೆಗಡೆ ಇವರು ನಿರೂಪಿಸಿದರು ಮತ್ತು ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್ ರವರು ವಂದಿಸಿದರು.