ಶಿರಸಿ : ತಾಲೂಕಿನ ಸೋಂದಾ ಗ್ರಾಮದಲ್ಲಿ ಆಯೋಜಿಸಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡಿದ್ದರು.
ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.
ಈ ಸಭೆಯಲ್ಲಿ ಶ್ರೀ ಆರ್ ವಿ ಹೆಗಡೆ, ಬಿಜೆಪಿ ಗ್ರಾಮಾಧ್ಯಕ್ಷರು, ಶ್ರೀ ಕೃಷ್ಣ ಎಸಳೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಶ್ರೀ ಮಂಜುನಾಥ ಬಂಡಾರಿ, ಅಧ್ಯಕ್ಷರು – ಸೋಂದಾ ಪಂಚಾಯತ, ಸೋಂದಾ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ ವಿ ಹೆಗಡೆ, ಶ್ರೀ ವಿನಾಯಕ ಹುಲಗೊಳ್, ಶ್ರೀಮತಿ ರಮಾ ಹೆಗಡೆಯವರು ಭಾಗಿಯಾಗಿದ್ದರು.