ಶಿರಸಿ: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ತಾಣದ ಉ. ಕ ಜಿಲ್ಲಾ ಸಂಚಾಲಕರಾಗಿ ದೀಪಕ್ ದೊಡ್ಡೂರ್ ರನ್ನು ನಿಯೋಜಿಸಲಾಗಿದೆ ಈ ಹಿಂದೆ ಕಾಂಗ್ರೆಸ್ ನ ಯು ಮುಖಂಡರಾಗಿ ಗುರುತಿಸಿಕೊಂಡಿದ್ದ ಇವರಿಗೆ ಇದೀಗ ಈ ಸ್ಥಾನ ಒಲಿದು ಬಂದಿದೆ.
ಕೆಪಿಸಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶದ ಮೇರೆಗೆ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಹಾಗೂ ಸಾಮಾಜಿಕ ಜಾಲತಾಣಗಳ ರಾಜ್ಯ ಸಂಚಾಲಕ ಏ.ಎನ್. ನಟಾರಾಜ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅವರ ಸಂಘಟನಾತ್ಮಕ ಕೌಶಲ್ಯ ಗುರುತಿಸಿ ಪಕ್ಷ ಈ ಮಹತ್ತರ ಜವಾಬ್ದಾರಿ ನೀಡಿದೆ. ಫೇಸ್-ಬುಕ್, ಟ್ವಿಟರ್ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲ ಸಾಮಾಜಿಕ ಮಾದ್ಯಮಗಳಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ದೀಪಕ ಪ್ರತಿನಿಧಿಸಲಿದ್ದಾರೆ.
ಜನರ ಅಶೋತ್ತರಗಳಿಗೆ ಸ್ಪಂದಿಸುವ ಮಹತ್ತರ ಜವಾಬ್ದಾರಿ ಜೊತೆಗೆ ಸಮಾಜ ನಿರ್ಮಾಣ ಹಾಗೂ ಜನಾಭಿಪ್ರಾಯ ರೂಪಿಸುವಲ್ಲಿ ಸಮಕಾಲೀನವಾಗಿ ಬಹಳ ಮಹತ್ತರಪಾತ್ರ ನಿರ್ವಹಿಸುತ್ತಿರುವ ಮೂಲಕ
ರಾಜ್ಯ ಹಾಗೂ ಜಿಲ್ಲೆಯ ಎಲ್ಲ ಹಿರಿಯ ನಾಯಕರು, ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕವನ್ನು ಇರಿಸಿಕೊಂಡು ಕಾರ್ಯ ನಿರ್ವಹಣೆ ಮಾಡಲಿದ್ದಾರೆ ದೀಪಕ ಹೆಗಡೆ ದೊಡ್ಡೂರ್