ಯಲ್ಲಾಪುರ: ಗೋವನ್ನು ಕಾಮಧೇನು ಅಂತಾರೇ..ಬೇಡಿದ್ದನ್ನೆಲ್ಲವನ್ನೂ ನೀಡುತ್ತಾಳೆ ಗೋ ಮಾತೆ ಎಂಬುದೊಂದು ಮಾತಿದೆ. ಈ ಮಾತು ಇದೀಗ ಸತ್ಯವಾಗಿದೆ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸಮೀಪದ ಕಲ್ಲೇಶ್ವರದಲ್ಲಿ ರೈತರೊಬ್ಬರು ಸಾಕಿರುವ ಹಸುವೊಂದು ಗರ್ಭ ಧರಿಸದೇ ಹಾಲು ನೀಡುವ ಮೂಲಕ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ.

ಈ ಹಸು ಜನಿಸಿದ ಒಂಭತ್ತು ತಿಂಗಳಿಗೇ ಗರ್ಭ ಧರಿಸದೇ ಇದ್ದರೂ ಹಾಲು ನೀಡುತ್ತಿತ್ತು ಎನ್ನಲಾಗಿದೆ. ಇದೀಗ ಹಸುವಿಗೆ ಎರಡು ವರ್ಷ ತುಂಬಿದ್ದು, ಕಳೆದ ಒಂದೂವರೆ ವರ್ಷದಿಂದ ದಿನಕ್ಕೆ ಒಂದೂವರೆ ಲೀಟರ್‌ ಹಾಲು ನೀಡುತ್ತಿರುವುದೇ ಈ ಹಸುವಿನ ವಿಶೇಷ.

RELATED ARTICLES  ಆತ್ಮಹತ್ಯೆಗೆ ಶರಣಾದ ಖ್ಯಾತ ಸಿನಿಮಾ ನಟ.

ಈ ಕರುವಿಗೆ ಒಂಭತ್ತು ತಿಂಗಳಾಗಿದ್ದಾಗಲೇ ಅಚಾನಕ್ ಆಗಿ ಕರುವಿನೊಂದಿಗೆ ಆಟವಾಡುತ್ತಾ ಮಗುವೊಂದು ಕೆಚ್ಚಲಿಗೆ ಕೈಹಾಕಿ ಎಳೆದಾಗ ಹಾಲು ಬರತೊಡಗಿರುವುದು ಪತ್ತೆಯಾಗಿದೆಯಂತೆ. ಅಂದಿನಿಂದ ನಿತ್ಯ ಎರಡು ಅವಧಿಗೆ ಹಸುವಿನ ಹಾಲು ಹಿಂಡಲಾರಂಭಿಸಿದರು.
ಹಾಲು ಹಿಂಡಲಾರಂಭಿಸಿ ಸುಮಾರು 15 ತಿಂಗಳಾದರೂ ಹಾಲು ಕೊಡುತ್ತಲೇ ಇದೆ.

RELATED ARTICLES  ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕುವ ಪ್ರಯತ್ನ ಮಾಡುವುದೆಂದರೆ, ಹಿಂದೂತ್ವನಿಷ್ಠರ ಧ್ವನಿ ಅಡಗಿಸುವ ಷಡ್ಯಂತ್ರವಾಗಿದೆ : ಕುಮಟಾದಲ್ಲಿ ಸನಾತನ ಸಂಸ್ಥೆ ಬೆಂಬಲಿಸಿ ಮನವಿ ಸಲ್ಲಿಕೆ

ಈ ಮೊದಲು ಹಸು ಮೂರು ಲೀ. ಹಾಲು ನೀಡುತ್ತಿತ್ತು. ಈ ಅಚ್ಚರಿಯ ಸನ್ನಿವೇಶಗಳು ವಿಜ್ಞಾನಕ್ಕೊಂದು ಸವಾಲು ಎಂದೇ ಹೇಳಲಾಗುತ್ತಿದೆ.