ಮೇಷ:- ಹಲವು ದಿನಗಳಿಂದ ಒಂದು ಸ್ಪಷ್ಟ ಸ್ವರೂಪ ಕೊಡಲು ಸಾಧ್ಯವಾಗದ ಸಂಗತಿಗೆ ನಿಶ್ಚಿತ ರೂಪ ದೊರೆಯಲಿದೆ. ಇದರಿಂದ ಆರ್ಥಿಕ ಸಂಕಷ್ಟ ಕಡಿಮೆ ಆಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ.
ವೃಷಭ:- ನಿಮ್ಮ ಇತ್ತೀಚಿನ ಕಾರ್ಯಕ್ರಮ ಜನಮನ್ನಣೆ ಗಳಿಸಿದೆ. ಆದರೆ ಅದರಲ್ಲೂ ತಪ್ಪು ಹುಡುಕುವ ಕೆಲ ಜನರಿದ್ದಾರೆ. ಅನ್ಯರು ನಿಮ್ಮ ಸಲುವಾಗಿ ಹೊಗಳಲಿ ಅಥವಾ ತೆಗಳಲಿ ಎಲ್ಲವನ್ನು ನಗುಮುಖದಿಂದ ಸ್ವೀಕರಿಸಿ. ಇದರಿಂದ ನಿಮ್ಮ ಘನತೆ ಹೆಚ್ಚುವುದು.
ಮಿಥುನ:- ವಿಶೇಷವಾದ ಪ್ರವಾಸ ಕಾರ್ಯಕ್ರಮ ನಿಗದಿಗೊಳ್ಳಲು ಅವಕಾಶ ದಿಢೀರಾಗಿ ಕೂಡಿಬರುತ್ತದೆ. ಇದನ್ನು ಉಪಯೋಗಿಸಿಕೊಂಡಲ್ಲಿ ನಿಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಕಟಕ:- ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬಂತೆ ನೀವು ಆಡುವ ಮಾತು ನಿಮ್ಮ ಹತ್ತಿರದ ವೃಕ್ತಿಗೆ ಘಾಸಿಯನ್ನುಂಟು ಮಾಡುವುದು. ಇದರಿಂದ ಅವರು ಕುಪಿತರಾಗಿ ನಿಮ್ಮ ಮೇಲೆ ಜಗಳಕ್ಕೆ ಬರುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ಇರಿ.
ಸಿಂಹ:- ಅನವಶ್ಯಕ ಖರ್ಚುಗಳು ನಿಮ್ಮನ್ನು ಹೈರಾಣ ಮಾಡುವುದು. ಬರಬೇಕಾದ ಹಣ ಸಕಾಲದಲ್ಲಿ ಬರದೆ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗುವುದು. ಮನೋನಿಯಾಮಕ ರುದ್ರದೇವರನ್ನು ಮನಸಾ ಸ್ಮರಿಸಿ. ಒಳಿತಾಗುವುದು.
ಕನ್ಯಾ:- ನಿಮ್ಮ ಮಕ್ಕಳಿಗೆ ನೀವು ತಿಳಿಸಬೇಕೆಂದಿರುವ ಮಹತ್ವದ ವಿಷಯವನ್ನು ತಿಳಿಸಲು ಉತ್ತಮ ದಿನವಾಗಿದೆ. ಇದರಿಂದ ಮುಂದಿನ ದಿನಗಳನ್ನು ಸರಾಗವಾಗಿ ರೂಪಿಸಿಕೊಳ್ಳಲು ಸಹಾಯವಾಗುವುದು. ಮಕ್ಕಳಿಗೂ ಸ್ವಲ್ಪ ಜವಾಬ್ದಾರಿಯನ್ನು ಕಲಿಸಿ.
ತುಲಾ:- ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಟಿಲ ಸಮಸ್ಯೆಗಳು ಎದುರಾಗುವವು. ಭಗವಂತನ ಮೊರೆ ಹೋಗಿ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಸ್ನೇಹಿತರ ಹಣಕಾಸು ವಿಚಾರದಲ್ಲಿ ಮಧ್ಯವರ್ತಿಯಾಗಿ ಕಾಗದ ಪತ್ರಗಳಿಗೆ ಸಹಿ ಮಾಡದಿರಿ.
ವೃಶ್ಚಿಕ:- ಅಜೀರ್ಣ ಅಥವಾ ವಾಯು ತೊಂದರೆ ಎದುರಾಗುವ ಸಾಧ್ಯತೆ ಇದೆ. ಮನೆ ವೈದ್ಯರ ಸೂಕ್ತ ಸಲಹೆಯಂತೆ ಔಷಧೋಪಚಾರ ಪಡೆಯಿರಿ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ.
ಧನುಸ್ಸು:- ಏನೋ ಆತಂಕ ಎದುರಾಗಲಿದೆ ಎಂದು ವಿಚಲಿತರಾಗುವ ಸಾಧ್ಯತೆ ಇದ್ದು ಎಲ್ಲವೂ ದೈವಕೃಪೆಯಿಂದ ಪರಿಹಾರವಾಗಲಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಮಕರ:- ನಿಮಗೆ ಸಂಬಂಧಪಡದ ವ್ಯಕ್ತಿಗಳು ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ಮೂಗು ತೂರಿಸುವುದರಿಂದ ಮುಜುಗರಕ್ಕೆ ಒಳಗಾಗುವಿರಿ. ಅಂತಹ ವ್ಯಕ್ತಿಗಳಿಂದ ದೂರ ಇರಿ. ಅನುಕೂಲವಾಗುವುದು.
ಕುಂಭ:- ಯಾರೇ ನಿಮ್ಮ ನಿಲುವನ್ನು ಟೀಕಿಸಲಿ ನಿಮ್ಮ ನಿಲುವು ತರ್ಕಪೂರ್ಣವಾಗಿದ್ದಲ್ಲಿ ಹೆಜ್ಜೆಯನ್ನು ಹಿಂದೆ ಇಡಲೇ ಬೇಡಿ. ಸಾಹಸವಂತನಿಗೆ ಭಗವಂತ ಸಹಾಯಹಸ್ತ ನೀಡುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.
ಮೀನ:- ನಿಮ್ಮ ವಿಚಾರದಲ್ಲಿ ಸ್ವಜನರು ತಿಳಿದುಕೊಂಡ ತಪ್ಪು ಗ್ರಹಿಕೆಗಳು ದೂರವಾಗಲು ಶುಭ ದಿನವಾಗಿದೆ. ಹಾಗಾಗಿ ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವುದು. ನೂತನ ಕೆಲಸ ಮಾಡಲು ಹೊಸ ಉತ್ಸಾಹ ಮೂಡುವುದು.