ಹೊನ್ನಾವರ : ತಾಲೂಕಿನ ವಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು..


ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಶತಮಾನ ಸಂಭ್ರಮ  ಸಂಭ್ರಮದಿಂದಲೇ ನಡೆಸಲಾಯಿತು.. ಕಾರ್ಯಕ್ರಮದ ಸಮಾರೋಪ ಸಮಾರಂಭ ದ ಮುಖ್ಯ ಅತಿಥಿಗಳಾಗಿ ಉದ್ಯಮಿ, ಶಿಕ್ಷಣ ಪ್ರೇಮಿ ಸುಬ್ರಾಯ ವಾಳ್ಕೆ ಭಾಗವಹಿಸಿದ್ದರು.. ಸಮಾರಂಭದಲ್ಲಿ ಮಾತನಾಡಿದ ವಾಳ್ಕೆ ವಂದೂರಿನ ಈ ಶತಮಾನದ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತಸ ತಂದಿದೆ…ಹಿರಿಯರ ಶ್ರಮದ ಪ್ರತಿಫಲವಾಗಿ ಗ್ರಾಮೀಣ ಪ್ರದೇಶದ ಈ ಶಾಲೆ ಶತಮಾನದ ಗಡಿ ದಾಟಿದೆ ಇದಕ್ಕೆ ಈ ಊರಿನ ನಾಗರಿಕರ ಸಹಕಾರ ವೇ ಕಾರಣ.. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ.. ಮಕ್ಕಳಲ್ಲಿ ಈಗಿನಿಂದಲೇ ಉತ್ತಮ ಸಂಸ್ಕಾರ, ದೇಶಪ್ರೇಮ ಬೆಳೆಸಬೇಕಾಗಿದೆ.. ಹಳ್ಳಿಗಳನ್ನು ವೃದ್ಧಾಶ್ರಮ ಆಗಲು ಬಿಡಬಾರದು.. ವೃದ್ಧರನ್ನು ಗೌರವಿಸಿ ಅವರು ಉತ್ತಮವಾಗಿ ಜೀವನದ ಕೊನೆಯ ದಿನಗಳನ್ನು ಕಳೆಯುವಂತೆ ನೋಡಿಕೊಳ್ಳಬೇಕು.. ನಮಗೆ ಸುಂದರ ಜೀವನ ಕಲ್ಪಿಸಿದ ಅವರನ್ನು ವೃದ್ಧಾಶ್ರಮ ಕ್ಕೆ ತಳ್ಳದೇ ನಾವುಗಳೇ ಅವರ ಸೇವೆ ಮಾಡಿ ಅವರು ಸಂತೋಷ ದಿಂದ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಮನವಿ ಮಾಡಿದರು..

RELATED ARTICLES  ವಿಶ್ವ ರಂಗಭೂಮಿ ದಿನಾಚರಣೆ: ಮನ ಗೆದ್ದ ರಂಗಸಂಗೀತ


ಹಿರಿಯ ಹಳೆಯ ವಿದ್ಯಾರ್ಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು ಜೊತೆಗೆ ಉದ್ಯಮಿ, ಶಿಕ್ಷಣ ಪ್ರೇಮಿ ವಾಳ್ಕೆ ಯವರಿಗೂ ಕೂಡ ಸನ್ಮಾನಿಸಿ ಗೌರವಿಸಲಾಯಿತು..


ವೇದಿಕೆಯಲ್ಲಿ ಜಿ ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕ, ಎಮ್ ಜಿ ಭಟ್ಟ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಇತರ ಗಣ್ಯರು ಉಪಸ್ಥಿತರಿದ್ದರು..

RELATED ARTICLES  ಪರೇಶ್ ಮೇಸ್ತ ಹತ್ಯೆ ಖಂಡಿಸಿ ಶಿರಸಿಯಲ್ಲಿ ನಡೆಯಿತು ಪ್ರತಿಭಟನೆ.