ಕುಮಟಾ : ವಿವೇಕ ನಗರ ವಿಕಾಸ ಸಂಘ(ರಿ) ಕುಮಟಾ, ಈ ಸಂಘವು ಉತ್ತಮ ಸಮಾಜನಿರ್ಮಾಣದ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ್ಲು ಪ್ರಜ್ಞಾವಂತರೇ ಹಚ್ಚಿನ ಸಂಖ್ಯೆಯಲ್ಲಿರುವ ವಿವೇಕ ನಗರದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಮತ್ತು ಸಾಮರಸ್ಯದ ಸ್ಥಾಪನೆಗಾಗಿ ಪ್ರಯತ್ನಿಸುತ್ತಿದೆ. ಕಳೆದ ಒಂದು ವóರ್ಷದಿಂದ ಸಮಾನಮನಸ್ಕರೆಲ್ಲ ಒಂದೆಡೆ ಸೇರಿ ಸಂಘವನ್ನು ಸ್ಥಾಪನೆ ಮಾಡಿಕೊಂಡು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿ ಭವಿಷ್ಯದಲ್ಲಿ ಒಂದು ಮಾದರಿಯ ಸಂಘಟನೆಯನ್ನಾಗಿ ರೂಪುಗೊಳಿಸುವ ಉದ್ದೇಶದೊಂದಿಗೆ “ವಿವೇಕ ಉತ್ಸವ” ಹೆಸರಿನಲ್ಲಿ ಪ್ರಥಮ ವಾರ್ಷಿಕೋತ್ಸವವನ್ನು ಸಂಘಟಿಸಲಾಗಿದೆ.
ದಿನಾಂಕ;10-02-2019 ರಂದು ಸಂಜೆ 5.30 ಗಂಟೆಗೆ ಹಿರಿಯ ಪ್ರಾಥಮಿಕ ಶಾಲೆ ಶಾರದಾನಿಲಯ ವಿವೇಕನಗರದಲ್ಲಿ ನಡೆಯಲಿದ್ದು ಹೊನ್ನಾವರದ ಸೇಂಟ್ ಥೊಮಸ್ ಪ್ರೌಢ ಶಾಲೆಯ ವಿಶ್ರಾಂತ ಪ್ರಾಂಶುಪಾಲರಾದ ಶ್ರೀಎಸ್.ಜೆ.ಕೈರಾನ್ ಅವರು ಮುಖ್ಯ ಅತಿಥಿಗಳಾಗಿ, ಹೊನ್ನಾವರದ ಹಿರಿಯ ಪತ್ರಕರ್ತರಾದ ಶ್ರೀ ಜಿ.ಯು.ಭಟ್ ಇವರು ಉದ್ಘಾಟಕರಾಗಿಯೂ ಮತ್ತು ಕುಮಟಾ ಆರಕ್ಷಕ ವೃತ್ತನಿರೀಕ್ಷಕರಾದ ಶ್ರೀ ಸಂತೋಷ ಶೆಟ್ಟಿಯವರು ಅತಿಥಿಗಳಾಗಿಯೂ ಆಗಮಿಸಲಿದ್ದಾರೆ. ಎಸ್.ಡಿ.ಎಮ್.ಸಿ ಆಧ್ಯಕ್ಷರಾದ ಶ್ರೀಕಾಂತ ನಾಯ್ಕ, ಈ ಭಾಗದ ಪುರಸಭಾಸದಸ್ಯರಾದ ಶ್ರೀಮತಿ ಗೀತಾ ಮುಕ್ರಿ ಹಾಗೂ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ದೇವು ಎಸ್.ಮುಕ್ರಿಯವರು ಗೌರವ ಉಪಸ್ಥಿತಿಯನ್ನು ಹೊಂದಿರುತ್ತಾರೆ. ವಿವೇಕ ನಗರ ವಿಕಾಸ ಸಂಘದ ಅಧ್ಯಕ್ಷರಾದ ಹೊನ್ನಾವರದ ಎಸ್.ಡಿ.ಎಮ್.ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಎಮ್.ಆರ್.ನಾಯಕ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕುಮಟಾದ ಹೆಮ್ಮೆಯ ಪುತ್ರ, ವಿವೇಕನಗರದವನೇ ಆದ ಪ್ರಸ್ತತ ಭಾರತ ಕ್ರಿಕೆಟ್ ತಂಡದ ಯಶಸ್ಸಿನ ತೆರೆಮರೆಯ ಸೂತ್ರದಾರನಾದ ಶ್ರೀ ರಾಘವೇಂದ್ರ ದಿವಗಿಯವರನ್ನು ಮತ್ತು ಸಂಗೀತ ಕ್ಷೇತ್ರದಲ್ಲಿ ವಿಶೇಷಸಾಧನೆಯನ್ನು ಮಾಡುತ್ತಿರುವ ವಿವೇಕನಗರದವಳೇ ಆದ ಕುಮಾರಿ ರಮ್ಯಾ ಆರ್. ಭಟ್ ಅವರನ್ನುವೇದಿಕೆಯಲ್ಲಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಮಾಸೂರ ತಂಡದವರಿಂದ ಜಾನಪದ ನೃತ್ಯ, ಹಟ್ಟಿಕೇರಿ ಮೂರುರು ತಂಡದವರಿಂದ ಕೋಲಾಟ, ಕುಮಾರಿ ಅನನ್ಯ ಮತ್ತು ಅಪೂರ್ವ ಸಹೋದರಿಯವರಿಂದ ಭರತನಾಟ್ಯ ಹಾಗೂ ಕುಮಾರಿ ರಮ್ಯಾ ಆರ್.ಭಟ್ ಇವರಿಂದ ಶಾಸ್ತ್ರೀಯ ಹಾಗೂ ಲಘುಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ವಿವೇಕ ನಗರ ವಿಕಾಸ ಸಂಘವು ಅಸ್ಥಿತ್ವಕ್ಕೆ ಬಂದ ದಿನದಿಂದ ಶಾಲೆಯಲ್ಲಿ ರಕ್ತದ ಗುಂಪುಗಳ ವರ್ಗೀಕರಣ ಶಿಬಿರ, ಆರುತಿಂಗಳುಗಳ ಕಾಲ ಪ್ರತಿ ರವಿವಾರ ಮುಂಜಾನೆ 7 ಗಂಟೆಯಿಂದ 9 ಗಂಟೆಯವರೆಗೆ ವಿವೇಕನಗರದ ಎಲ್ಲಾ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಪರಿಸರದ ಕುರಿತು ಜನಜಾಗೃತಿ ಮಾಡುವುದಕ್ಕಾಗಿ ವನಮಹೋತ್ಸವ ಆಚರಣೆಯನ್ನು ಮಾಡಿ ಗಿಡಗಳಿಗೆ ನೀರುಣಿಸುತ್ತಿರುವುದು, ಪ್ಲಾಸ್ಟಿಕ್ ಬಳಕೆಯ ವಿರುದ್ದ ಜನಜಾಗೃತೆಯನ್ನುಂಟು ಮಾಡಲು ಸಂಘದ ಹೆಸರಿನ 500 ಬಟ್ಟೆಯ ಚೀಲಗಳನ್ನು ಮಾಡಿಸಿ ಹಂಚಿರುವುದು ಅಗಸ್ಟ 15 ಮತ್ತು ಜನವರಿ 26 ರಂದು ಶಾಲಾ ಮಕ್ಕಳಿಗೆ ಧ್ವಜಾರೋಹಣ ಕಾರ್ಯಕ್ರಮದ ನಂತರ ಚೊಕಲೇಟ್ ವಿತರಿಸುವುದು, ಮುಂತಾದ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಲೇ ಬಂದಿರುತ್ತದೆ.
ಅಕ್ಟೋಬರ 7, 2018 ರಂದು ಯಕ್ಷಗಾನ ಕಾರ್ಯಕ್ರಮವನ್ನು ಸಂಘಟಿಸಿ ಅಲ್ಲಿ ಸಂಗ್ರಹಿಸಿ ಸಂಘದ ಮುಂದಿನ ಯೋಜನೆಯ ನಿಟ್ಟಿನಲ್ಲಿ ಇಟ್ಟಿದ್ದ ಹಣದಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಬಾಪ್ತನ್ನು ಮಾತ್ರವೇ ವಿವೇಕ ಉತ್ಸವದ ಹೆಸರಿನ ಪ್ರಥಮ ವಾರ್ಷಿಕೋತ್ಸವಕ್ಕೆ ಬಳಸಿಕೊಳ್ಳಲಾಗುತ್ತಿದೆ.ಈ ಕಾರ್ಯಕ್ರಮಕ್ಕಾಗಿ ಯಾರೊಬ್ಬರಿಂದಲೂ ಸಂಘ ದೇಣಿಗೆ ಸಂಗ್ರಹಿಸುತ್ತಿಲ್ಲ. ಒಳ್ಳೆಯ ಉದ್ದೇಶದಿಂದ ಸಂಘಟಿತರಾಗಿ ನಾವು ಮಾಡುವ ಕಾರ್ಯಕ್ರಮಗಳಿಗೆ ಜನರು ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ ಎನ್ನುವುದನ್ನು ಸ್ಮರಿಸುತ್ತ್ತಾ “ವಿವೇಕ ಉತ್ಸವ’ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಸಂಘದ ಪರವಾಗಿ ಅಧ್ಯಕ್ಷರಾದ ಡಾ. ಎಮ್.ಆರ್. ನಾಯಕ ವಿನಂತಿಸಿಕೊಂಡಿರುತ್ತಾರೆ.