ಹೊನ್ನಾವರ: ಸಾಮಾಜಿಕ ಪರಿಶೋಧನೆಯಿಂದ ನರೇಗಾ ಯೋಜನೆಯಲ್ಲಿ ಸ್ಪಷ್ಟತೆ ಕಾಣುವಂತಾಗಿದ್ದು, ಇದರಿಂದ ಪಾರದರ್ಶಕತೆ ಕಾಣಲು ಸಾಧ್ಯವಾದಂತಾಗಿದೆ ಇದು ಜನರಲ್ಲಿ ಜಾಗ್ರತಿ ಮೂಡಿಸುತ್ತಿದೆ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ನುಡಿದರು. ಅವರು ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಪಂಚಾಯತಿಯಲ್ಲಿ ಗುರುವಾರ ನಡೆದ 2018-19ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಪಂಚಾಯತ ರಾಜ್ ವಿಭಾಗದಲ್ಲಿ ಸಾಕಷ್ಟು ಯೋಜನೆಗಳು ಬಂದಿದ್ದರೂ ಸಹ ಉದ್ಯೋಗ ಖಾತ್ರಿ ಯೋಜನೆಯಷ್ಟು ವ್ಯಾಪಕವಾದ ಮತ್ತು ಜನಾನುರಾಗಿಯಾದ ಜನಪ್ರೀಯವಾದ ಯಾವ ಯೋಜನೆಗಳು ಬಂದಿರಲಿಲ್ಲ ಇದು ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಆಶಾ ಕಿರಣ ಮೂಡಿಸಿದ ಯೋಜನೆ ಇದಾಗಿದ್ದು ಇಲ್ಲಿ ಸುಮಾರು ನಲವತ್ತಕ್ಕೂ ಮಿಗಿಲಾದ ಕಾಮಗಾರಿಗಳು ಕೈಗೊಳ್ಳಬಹುದಾದ ಸಾಧ್ಯತೆ ಇದೆ ಎಂದರು. ಒಂದೆರಡು ಜನಗಳಿಗೆ ತಾಂತ್ರಿಕ ಕಾರಣಗಳಿಂದ ಕೂಲಿ ವಿಳಂಭವಾದ ಮಾತ್ರಕ್ಕೆ ಯೋಜನೆಯನ್ನೇ ದೂಷಿಸುವುದು ಅರ್ಥಹೀನ ಗ್ರಾಮೀಣ ಜನರೇ ಹೇಳುವಂತೆ ಕೆಲಸವಿಲ್ಲದೇ ಕಂಗಾಲಾದ ಬಡಜನರ ಪಾಲಿಗೆ ಖಾತ್ರಿ ಯೋಜನೆ ಹೊಸ ಚೈತನ್ಯ ಮೂಡಿಸಿದೆ ಎಂದರು. ನಂತ ಸಾಮಾಜಿಕ ಪರಿಶೋಧನಾ ವರದಿಯನ್ನು ಮಂಡಿಸಿ ಸಭೆಯ ತೀರ್ಮಾನಕ್ಕೆ ಬಿಡಲಾಯಿತು.

RELATED ARTICLES  ಕಾಂಗ್ರೆಸ್ ಓ.ಬಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರತ್ನಾಕರ ನಾಯ್ಕ ನೇಮಕ


ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಬಗೆಗಿನ ಅನೇಕ ಗೊಂದಲಗಳ ಬಗ್ಗೆ ಪ್ರಶ್ನಿಸಲು ಅವಕಾಶ ಕಲ್ಪಿಸಲಾಯಿತು. ಕಾಮಗಾರಿಯ ಸ್ಥಳದಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾದ ನಾಮಫಲಕ ನಿಗದಿಪಡಿಸಿದ ಮೊತ್ತಕ್ಕಿಂತಲು ಬಹಳ ಕಡಿಮೆ ಧರದಲ್ಲಿ ತಯಾರಿಸಲಾಗಿದ್ದರು ಸಹ ಪೂರೈಕೆದಾರರು ಅತಿ ಹೆಚ್ಚು ಮೊತ್ತವನ್ನು ಪಡೆದುಕೊಳ್ಳುತ್ತಾರೆ ಎಂದು ಸಬೆಯಲ್ಲಿ ಸಾರ್ವಜನಿಕರು ಆಕ್ಷೇಪಣೆ ವ್ಯಕ್ತಪಡಿಸಿ. ತಾವೆ ನಾಮಫಲಕ ಸ್ವತಃ ತಯಾರಿಸುವುದಾಗಿ ತಿಳಿಸಿದರು.
ಯೋಜನೆಯ ನಿಯಮದಂತೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಮಹಾದೇವಪ್ಪ ಕೋಟೆ ಮಾತನಾಡಿ ತಮ್ಮ ಇಲಾಖೆಯಲ್ಲಿ ಹೊಸ ತೋಟ ನಿಮಾಣ ಅಡಿಕೆ ತೆಂಗು ಬಾಳೆ ಬೆಳಗಳಿಗೆ ನೀಡಬಹುದಾದ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.

RELATED ARTICLES  ಕಂದಾಯ ಸಚಿವರಿಗೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ'ದ ಕುರಿತು ಮಾಹಿತಿ ನೀಡಿದ ಕಾರ್ಯಕರ್ತರು.


ಪಂಚಾಯತ ಅಭಿವೃದ್ಧಿ ಅಧಿಕಾರಿ ಈರಪ್ಪ ಲಮಾಣ ಎಲ್ಲರನ್ನೂ ಸ್ವಾಗತಿಸಿ ಹಿಂದಿನ ಸಭೆಯ ನಡಾವಳಿ ಓದಿ, ಅನುಪಾಲನ ವರದಿಯನ್ನು ಮಂಡಿಸಿದರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಅನ್ನಪೂರ್ಣ ಶಾಸ್ತ್ರಿ, ಉಪಾಧ್ಯಕ್ಷ ಉದಯ ನಾಯ್ಕ ,ಸದಸ್ಯರಾದ ಗೋವಿಂದ ನಾಯ್ಕ, ಶಾರದಾ ಮೇಸ್ತ, ರೇಷ್ಮಾ ಮೇಸ್ತ, ಮೊದಲಾದವರು ಉಪಸ್ಥಿತರಿದ್ದರು.