ಯಲ್ಲಾಪುರ: ಯಲ್ಲಾಪುರ ಪೊಲೀಸರು ಸೋಮವಾರ ರಾತ್ರಿಯಿಂದ ಮಂಗಳವಾರ ನಸೂಕಿನವರೆಗೆ ಭಾರಿ ಕಾರ್ಯಾಚರಣೆ ನಡೆಸಿ, ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ನೀರು ಆಹಾರ ವದಗಿಸದೆ, ವಧಾ ಗ್ರಹಕ್ಕೆ ಸಾಗಾಟ ಮಾಡಲಾಗುತ್ತಿದ್ದ 18 ಜಾನುವಾರುಗಳ ರಕ್ಷಣೆ ಮಾಡಿ. ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಭಟ್ಕಳಕ್ಕೆ ಒಂದು ಮಹಿಂದ್ರ ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿದ್ದ ಐದು ಎತ್ತುಗಳನ್ನು ರಾಷ್ಟ್ರೀಯ ಹೆದ್ದಾರಿ 63ರ ಪಟ್ಟಣ ವ್ಯಾಪ್ತಿಯ ವಿಶ್ವದರ್ಶನ ಪ್ರೌಢ ಶಾಲೆಯ ಹತ್ತಿರ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಾದ ಕಲಘಟಗಿ ಸಂಕಟಿಕೊಪ್ಪದ ಶ್ರೀಕಾಂತ ಹರಿಜನ ಬಂಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಅಂಕೋಲಾದಿಂದ ಕಲಘಟಗಿಗೆ ಮಹಿಂದ್ರ ಪಿಕ್ ಅಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ವಾಹನದೊಂದಿಗೆ ಜಾನುವಾರುಗಳನ್ನು ರಾಷ್ಟ್ರೀಯ ಹೆದ್ದಾರಿ ಕುಬೇರ ಹೋಟೆಲ್ ಎದುರು ವಶಪಡಿಸಿಕೊಳ್ಳಲಾಗಿದೆ. ಆರೋಪಿತರಾದ ಅಂಕೋಲಾ ಹೊಸ್ಕೇರಿ ನಿವಾಸಿ ರಾಘವೇಂದ್ರ ನಾರಾಯಣ ನಾಯಕ ಅಂಕೋಲಾ ಶೇಟಗೇರಿ ನಿವಾಸಿ ಸುರೇಶ ಬೊಮ್ಮಯ್ಯ ನಾಯಕ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾಗೋಡ ಕ್ರಾಸ್ ಬಳಿ ಅಂಕೋಲದಿಂದ ಕಲಘಟಗಿಗೆ ವಧಾ ಗ್ರಹಕ್ಕೆ ಸಾಗಿಸಲಾಗುತ್ತಿದ್ದ, ಎರಡು ಹಸು ಹಾಗೂ ಮೂರು ಕರುಗಳನ್ನು ರಕ್ಷಣೆ ಮಾಡಿರುವ ಪೊಲೀಸರು ಆರೋಪಿಗಳಾದ, ಅಂಕೋಲಾ ಶಿರಗುಂಜಿಯ ಬೊಮ್ಮಯ್ಯ ಬೀರಯ್ಯ ನಾಯಕ ಹಾಗೂ ಅಂಕೋಲಾ ಕಣಿಗಲ್ ನ ಪ್ರಶಾಂತ ದೇವಿದಾಸ ನಾಯಕ ಎಂಬುವವರನ್ನು ಬಂಧಿಸಲಾಗಿದೆ.

RELATED ARTICLES  ಸಾಧಕ ವೆಂಕಟೇಶ್ ನಾರಾಯಣ ಪ್ರಭು ರವರನ್ನು ಸನ್ಮಾನಿಸಿದ ಶಾಸಕರು.

IMG 20170801 WA0010
ಮೂರು ಪ್ರತ್ಯೇಕ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಾಹನ ಮೊತ್ತ 6 ಲಕ್ಷ ರೂಪಾಯಿ ಹಾಗೂ ಜಾನುವಾರುಗಳ ಮೊತ್ತ 1.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಜಾನುವಾರುಗಳನ್ನು ಸದ್ಯ ಎಪಿಎಂಸಿ ಆವಾರದಲ್ಲಿ ಆಶ್ರಯ ನೀಡಿದ್ದು, ನಂತರ ಅವುಗಳನ್ನು ಗೋಶಾಲೆಗೆ ಕಳಿಸಲಾಗುತ್ತದೆ ಎನ್ನಲಾಗಿದೆ.
ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ಎಸ್.ಆರ್ ನೇತ್ರತ್ವದಲ್ಲಿ, ಪ್ರೊಬೆಷನರಿ ಪಿಎಸೈ ನವೀನ್ ನಾಯ್ಕ, ಎ.ಎಸ್.ಐ ಗಳಾದ ಚವ್ಹಾಣ, ಎಲ್.ಪಿ. ಶೇಣವಿ, ಸಿಬ್ಬಂದಿಗಳಾದ ನಾಗಪ್ಪ ಲಮಾಣಿ, ಚಿದಾನಂದ ನಾಯ್ಕ, ಧ್ಯಾಮಟ್ಟಿ, ಹೋಮ್ ಗಾರ್ಡ್ಸ್ ಪ್ರಭಾಕರ ಸಿದ್ದಿ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

RELATED ARTICLES  ಮುಂದೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬರುವುದು ನಿಶ್ಚಿತ : ಐವಾನ್ ಡಿಸೋಜ