ಅಂಕೋಲಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಕರಾತ್ಮಕ ಚಿಂತನೆಗಳ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಮುಖ್ಯ ಶಿಕ್ಷಕ ಚಂದ್ರಕಾಂತ ಗಾಂವಕರ್ ಹೇಳಿದರು.
ಅವರು ಗುರುವಾರ ನಡೆದ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ತಂಡ ಬೋಧನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸ್ನೇಹದ ಕಡಲಲ್ಲಿ ಹಸ್ತಪ್ರತಿ ಬಿಡುಗಡೆಗೊಳಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸತತ ಅಧ್ಯಯನ ಪರಿಶ್ರಮ ದಿಂದ ಯಶಸ್ಸು ಸಾಧ್ಯ ಎಂದರು.
ವೇದಿಕೆಯಲ್ಲಿ ಮಾರ್ಗದರ್ಶಕ ಮಂಜುನಾಥ ಇಟಗಿ, ಶಿಕ್ಷಕ ರಮಾನಂದ ನಾಯ್ಕ , ವಿಜಯ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಶಿಕ್ಷಣಾರ್ಥಿ ನಾಜ್ಮಿನ್ ಶೇಕ್, ಕಾವ್ಯಶ್ರೀ ಅನಿಸಿಕೆ ಹೇಳಿದರು, ಪ್ರಿಯಾ ಸಂಗಡಿಗರು ಪ್ರಾರ್ಥಿಸಿದರು, ಪವಿತ್ರ ಗೌಡ ಸ್ವಾಗತಿಸಿದರು , ರೇಷ್ಮಾ ಕಾಮತ್ ವಂದಿಸಿದರು, ಶರ್ಮಿಳಾ ಪಡಕೆ ನಿರೂಪಿಸಿದರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.