ಬೆಂಗಳೂರು: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ ಆರೋಪ ಸಾಬೀತಾಗಿ ಉತ್ತರ ಕನ್ನಡ ಜಿಲ್ಲೆಯ ಒಂದೇ ಊರಿನ 11 ಮಂದಿ ಜೈಲು ಪಾಲಾಗಿದ್ದಾರೆ. ಈ ಸಂಬಂಧ ಕರ್ನಾಟಕ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಹುಳಿಯಾಲ ತಾಲೂಕಿನ ಬಸವಳ್ಳಿ ಗ್ರಾಮದ 11 ಮಂದಿ ತಲಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಈ ಆರೋಪಿಗಳು ಊರಿನಲ್ಲಿರುವ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿದ್ದರು. ಹುಳಿಯಾಲ ತಹಸಿಲ್ದಾರ್ ನೋಟಿಸ್ ನೀಡಿದ್ರೂ ಕ್ಯಾರೆ ಅಂದಿರಲಿಲ್ಲ.
ಬಸವಳ್ಳಿ ಗ್ರಾಮದ ಬಸವಣ್ಣಿಪ್ಪ ಪರಸಪ್ಪ ಹುಣಸಿಕಟ್ಟಿ 2 ಎಕರೆ, ಬಾಬು ಯಲ್ಲಪ್ಪ ದೊಡ್ಡಮನಿ 4 ಎಕರೆ, ಪುಂಡ್ಲಿಕ್ ಹೂವಣ್ಣ ಮಿರಾಶಿ 5 ಎಕರೆ, ಗೋವಿಂದ ಹೂವಣ್ಣ ರಾಟೋಟ್ಕರ್ 2 ಎಕರೆ, ದುಂಡಯ್ಯ ಶೇಖರಯ್ಯ ಹಿರೇಮಠ್ 4.10 ಎಕರೆ, ಪಾರ್ವತಿ ಬಸವಣ್ಣಿಪ್ಪ ಕಾಟೇನ್ನವರ್ 4.20 ಎಕರೆ, ಕೃಷ್ಣ ವಿಠ್ಠಲ ಮಿರಾಶ್ 4.20 ಎಕರೆ, ಫಕೀರ ಹನುಮಂತ ಪೂಜಾರ 4.20 ಎಕರೆ, ಪುಂಡಲೀಕ ಗಂಗಪ್ಪ ಖಾನಾಪುರಕರ 4.20 ಎಕರೆ, ಹನುಮಂತಪ್ಪ ಗಂಗಪ್ಪ ಖಾನಾಪುರಕರ 4.20 ಎಕರೆ ಮತ್ತು ಪುಂಡಲೀಕ ಬಸವಂತ ಖಂಡೇಕರ್ 4.22 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು.

RELATED ARTICLES  ಕನ್ಯಾಸಂಸ್ಕಾರ ದ ಕುರಿತು ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ


ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಲ್ಯಾಂಡ್ ಗ್ರಾಬಿಂಗ್ ಪ್ರೋಬಿಷನ್ ಕೋರ್ಟ್ ಆರೋಪಿಗಳಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟದಿದ್ದರೆ, ಮತ್ತೊಂದು ತಿಂಗಳು ಜೈಲಿನಲ್ಲಿರಬೇಕೆಂದು ಹೇಳಿದೆ.

RELATED ARTICLES  ಕುಮಟಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸುಬ್ರಾಯ ಭಟ್ಟ ಪುನರಾಯ್ಕೆ.