ಮೇಷ:- ನಿಮ್ಮ ಹತ್ತಿರದ ಬಂಧುಗಳು ಬಂದು ನಿಮ್ಮ ಮನಃಶಾಂತಿಗೆ ಭಂಗ ತರುವ ಸಾಧ್ಯತೆ ಇದೆ. ಸಮಾಧಾನದಿಂದಲೇ ವರ್ತಿಸಿ ಮತ್ತು ಗುರು ರಾಘವೇಂದ್ರರ ಮೊರೆ ಹೋಗುವುದು ಒಳಿತು. ಗುರುವಿನ ಅನುಗ್ರಹದಿಂದ ಒಳಿತಾಗುವುದು.

ವೃಷಭ:- ಮಾತಿನಲ್ಲಿ ನಯ ವಿನಯ ರೂಢಿಸಿಕೊಳ್ಳಿ. ಹೊಸ ಗೆಳೆಯರು ನಿಮ್ಮ ಸಹಾಯಕ್ಕೆ ಶೀಘ್ರದಲ್ಲೇ ಬರಲಿದ್ದಾರೆ. ಬಹುದಿನದಿಂದ ನಿರೀಕ್ಷೆಯಲ್ಲಿದ್ದ ಜಾಗದ ಮಾರಾಟಕ್ಕೆ ಚಾಲನೆ ದೊರೆಯಲಿದೆ.


ಮಿಥುನ:- ‘ಸಂಶಯಾತ್ಮ ವಿನಶ್ಯತಿ’ ಎನ್ನುವಂತೆ ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡಿದಲ್ಲಿ ಆಗುವ ಕೆಲಸವೂ ಆಗುವುದಿಲ್ಲ. ಹಾಗಾಗಿ ನಂಬಿರಿ. ನಂಬಿದರೆ ಶಿವ ಮಂಗಳವನ್ನುಂಟು ಮಾಡುವನು.

ಕಟಕ:- ಎಲ್ಲಾ ಕೆಲಸ ಕಾರ್ಯಗಳಲ್ಲಿ ಬಾಳ ಸಂಗಾತಿಯ ಸಲಹೆ ಸೂಚನೆಗಳನ್ನು ಪಾಲಿಸಿ. ಇದರಿಂದ ಮಹತ್ತರ ಲಾಭ ಉಂಟಾಗುವುದು. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.

ಸಿಂಹ:- ಎಷ್ಟೇ ವಿರೋಧ ಬಂದರೂ ನಿಮ್ಮ ಆತ್ಮಸಾಕ್ಷಿಯನ್ನು ಬಿಡದಿರಿ. ಇದರಿಂದ ನೆರೆಹೊರೆಯವರು ನಿಮ್ಮನ್ನು ದೇವರಂತೆ ಕಂಡು ಗೌರವಿಸುವರು. ಸಮಾಜದಲ್ಲಿ ನಿಮಗೆ ಗೌರವ ಆದರಗಳು ದೊರೆಯುವವು.

RELATED ARTICLES  ಆಧಾರ್ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್: ಆಧಾರ್ ಮಾಹಿತಿ ಕಳವು ಸಂವಿಧಾನಕ್ಕೆ ವಿರುದ್ಧ.

ಕನ್ಯಾ:- ಚಿಕ್ಕಪುಟ್ಟ ಪೇಪರ್‌ ಕಾಗದಗಳು ಬೇಕೆಂದು ಸೇರಿಸಿ ಇಟ್ಟುಕೊಂಡಿರುವ ನಿಮಗೆ ಸಕಾಲದಲ್ಲಿ ಪ್ರಮುಖ ದಾಖಲೆಗಳು ಸಿಗದೆ ಹೋಗಬಹುದು. ಹಾಗಾಗಿ ನಿಮ್ಮ ಟೇಬಲ್‌ ಮೇಲಿನ ಅಥವಾ ಕಚೇರಿಯಲ್ಲಿನ ಬೇಡದ ಕಡತಗಳನ್ನು ವಿಲೇವಾರಿ ಮಾಡಿ.

ತುಲಾ:- ಹಣಕಾಸಿನ ವಿಚಾರದಲ್ಲಿ ಆತುರದ ಬುದ್ಧಿ ಪ್ರದರ್ಶಿಸದೆ ನಿಧಾನವಾಗಿ ಹೆಜ್ಜೆ ಹಾಕಿ. ಜನ್ಮಸ್ಥ ಗುರುವು ಗೌರವ ಆದರಗಳನ್ನು ತಂದು ಕೊಡುವರಾದರೂ ಮಾನಸಿಕ ಕ್ಲೇಶ ತಪ್ಪಿದ್ದಲ್ಲ. ಮನೋ ನಿಯಾಮಕ ರುದ್ರದೇವರನ್ನು ಸ್ಮರಿಸಿ.

ವೃಶ್ಚಿಕ:- ವ್ಯಾಪಾರ ವ್ಯವಹಾರದಲ್ಲಿ ಅಷ್ಟೇನೂ ಲಾಭ ಆಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ವ್ಯಾಪಾರಸ್ಥರಿಗೂ ದುಡಿಮೆ ಅಷ್ಟಕ್ಕಷ್ಟೆ. ಹಾಗಾಗಿ ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಹಾಕಿದ ಬಂಡವಾಳಕ್ಕೆ ಮೋಸವಿಲ್ಲ.

RELATED ARTICLES  ಇಂದಿನ ನಿಮ್ಮ ದಿನ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ 10/05/2019ರ ರಾಶಿಫಲ

ಧನಸ್ಸು:- ‘ಪರರಿಗೆ ಉಪಕಾರಿ ಮನೆಗೆ ಮಾರಿ’ ಎಂಬಂತೆ ಸದಾ ಹೊರ ಜಗತ್ತಿನ ಆಗು ಹೋಗುಗಳನ್ನು ಗಮನಿಸುತ್ತಿರುವ ನೀವು ಅನಿವಾರ್ಯವಾಗಿ ಮನೆಯ ಸದಸ್ಯರ ಆರೋಗ್ಯದ ಕಡೆ ಲಕ್ಷ ್ಯ ಕೊಡಬೇಕಾಗಬಹುದು.

ಮಕರ:- ಅನುವಂಶೀಯವಾಗಿ ಬಂದಂತಹ ಕಾಯಿಲೆಗಳು ನಿಮ್ಮನ್ನು ಹೈರಾಣ ಮಾಡುವ ಸಾಧ್ಯತೆ ಇದೆ. ಹಗ್ಗವೆಂದು ತಿಳಿದಿದ್ದು ಹಾವಾಗಿ ಪರಿವರ್ತನೆ ಆಗುವ ಸಂದರ್ಭ ಇದೆ. ಆದಷ್ಟು ವಿವೇಚನೆಯಿಂದ ಕಾರ್ಯ ನಿರ್ವಹಿಸಿ.

ಕುಂಭ:- ಮನೆ, ಸೈಟ್‌, ಷೇರು ಖರೀದಿಯಲ್ಲಿ ತಜ್ಞರ ಸಲಹೆ ಪಡೆದು ಮುಂದುವರೆಯಿರಿ. ಲೇಖಕ ವರ್ಗದವರಿಗೆ ಸಮಾಜದಿಂದ ಮನ್ನಣೆ ದೊರೆಯುವುದು. ಹಿಂದಿನಂತೆ ಗುರುಗಳ ಸೇವೆಯನ್ನು ಮುಂದುವರೆಸಿ.

ಮೀನ:- ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಒತ್ತಡಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಮನೆ ಜಗಳವನ್ನು ಕಚೇರಿಗೆ ಕೊಂಡೊಯ್ಯದಿರಿ. ಹಾಗೆಯೆ ಕಚೇರಿ ಕೆಲಸವನ್ನು ಮನೆಗೆ ತರದಿರಿ.